ವಿಮಾನದಲ್ಲೂ ‘ವೈ-ಫೈ’ ಭಾಗ್ಯ!

Wi-Fi facility in flights

03-03-2020

ನವದೆಹಲಿ, ಮಾ.3: “ಸರ್‍/ಮೇಡಂ, ಪ್ಲೀಸ್‍ ಸ್ವಿಚ್ ಆಫ್‍ ಯುವರ್‍ ಮೊಬೈಲ್”- ಇದು ವಿಮಾನವೇರಿದ ಪ್ರಯಾಣಿಕರಿಗೆ ಗಗನಸಖಿಯರು ನೀಡುತ್ತಿದ್ದ ಸೂಚನೆ. ಅದರನ್ವಯ ಮೊಬೈಲ್‍ ಸ್ವಿಚ್‍ ಆಫ್‍ ಮಾಡಬೇಕಾಗಿ ಬರುತ್ತಿತ್ತು, ಇಲ್ಲವೇ ಅದನ್ನು ‘ಫ್ಲೈಟ್‍ ಮೋಡ್‍’ನಲ್ಲಿ ಇರಿಸಬೇಕಾಗುತ್ತಿತ್ತು.

ಆದರೆ ವಿಮಾನ ಪ್ರಯಾಣಿಕರಿಗೆ ಇನ್ನು ಮುಂದೆ ಆ ತಲೆಬಿಸಿಯಿಲ್ಲ. ವಿಮಾನದೊಳಗೆ ವೈ-ಫೈ ಇಂಟರ್ ನೆಟ್‍ ಸೌಲಭ್ಯ ಒದಗಿಸಲು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಹಸಿರು ನಿಶಾನೆ ತೋರಿರುವುದೇ ಇದಕ್ಕೆ ಕಾರಣ.

ವಿಮಾನ ಪಯಣಿಗರು ತಮ್ಮ ಸ್ಮಾರ್ಟ್‍ ಫೋನ್‍, ಲ್ಯಾಪ್‍ ಟಾಪ್‍, ಟ್ಯಾಬ್ಲೆಟ್‍ ಮೊದಲಾದ ಆಧುನಿಕ ಗ್ಯಾಜೆಟ್‍ಗಳ ಮೂಲಕ ವೈ-ಫೈ ಅಂತರ್ಜಾಲ ಸೇವೆ ಪಡೆಯಬಹುದು, ಕರೆಗಳನ್ನೂ ಮಾಡಬಹುದು ಎನ್ನುತ್ತದೆ ಸಚಿವಾಲಯದ ಅಧಿಸೂಚನೆ.

ಇಲ್ಲಿಯವರೆಗೂ, ಮಲೇಷಿಯಾ ಏರ್‍ಲೈನ್ಸ್‍, ಬ್ರಿಟಿಷ್‍ ಏರ್‍ವೇಸ್‍ ಸೇರಿದಂತೆ ವಿಶ್ವದ ಅನೇಕ ವಾಯುಯಾನ ಸಂಸ್ಥೆಗಳು ತಮ್ಮ ಪ್ರಯಾಣಿಕರಿಗೆ ವೈ-ಫೈ ಸೌಲಭ್ಯ ನೀಡುತ್ತಿದ್ದುದು ಹೌದಾದರೂ, ಅವು ಭಾರತದ ವಾಯುವಲಯ ಪ್ರವೇಶಿಸುತ್ತಿದ್ದಂತೆ ಈ ಸೌಲಭ್ಯ ಕಡಿತಗೊಳಿಸಬೇಕಾಗಿ ಬರುತ್ತಿತ್ತು ಎಂಬುದನ್ನಿಲ್ಲಿ ಸ್ಮರಿಸಬಹುದು.


ಸಂಬಂಧಿತ ಟ್ಯಾಗ್ಗಳು

Wi-Fi Laptop Civil aviation ministry Mobile


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ