ಸದ್ಯದಲ್ಲೇ ಕೆಪಿಸಿಸಿ ಗಾದಿಗೆ ಡಿಕೆಶಿ

DK Shivakumar to be nominated as KPCC Chief

02-03-2020

ಬೆಂಗಳೂರು, ಮಾ.2: ಕರ್ನಾಟಕ ಪ್ರದೇಶ ಕಾಂಗ್ರೆಸ್‍ ಸಮಿತಿ (ಕೆಪಿಸಿಸಿ)ಗೆ ನೂತನ ಅಧ್ಯಕ್ಷರನ್ನು ನೇಮಿಸುವ ವಿಷಯ ಬಹಳ ದಿನಗಳಿಂದ ಕಗ್ಗಂಟಾಗೇ ಉಳಿದಿರುವುದು ಗೊತ್ತಿರುವ ಸಂಗತಿಯೇ. ಕಾಂಗ್ರೆಸ್‍ ಪಕ್ಷದ ರಾಜ್ಯ ಘಟಕದಲ್ಲಿ ಮೈದಳೆದಿರುವ ಬಣ ರಾಜಕೀಯ ಇದಕ್ಕೆ ಕಾರಣವಾಗಿದ್ದನ್ನು ಅಲ್ಲಗಳೆಯುವಂತಿಲ್ಲ.

ಆದರೀಗ ಕದಡಿದ ನೀರು ತಿಳಿಯಾದಂತಿದೆ. ಎಲ್ಲ ಅಂದುಕೊಂಡಂತೆಯೇ ಆದರೆ, ಈ ವಾರದೊಳಗಾಗಿ ಡಿ.ಕೆ. ಶಿವಕುಮಾರ್‍ ಅವರು ಕೆಪಿಸಿಸಿ ಅಧ್ಯಕ್ಷಗಾದಿ ಅಲಂಕರಿಸುವುದು ಕಟ್ಟಿಟ್ಟಬುತ್ತಿ ಎಂಬ ಪಿಸುಮಾತುಗಳು ರಾಜಕೀಯ ಪಡಸಾಲೆಗಳಲ್ಲಿ ವ್ಯಾಪಿಸಿವೆ.

ಡಿಕೆಶಿ ಅವರು ಈ ಗಾದಿ ಅಲಂಕರಿಸಿ ಯಾವುದೋ ಕಾಲವಾಗಬೇಕಿತ್ತು. ಆದರೆ ಸಿದ್ದರಾಮಯ್ಯ ಬಣದಿಂದ ಹೊಮ್ಮಿದ ವಿರೋಧದಿಂದಾಗಿ ಅದು ಕೈಗೂಡಿರಲಿಲ್ಲ. ಈಗ ಕಾಂಗ್ರೆಸ್‍ನ ಹಿರಿಯ ನಾಯಕ ಗುಲಾಂ ನಬಿ ಆಜಾದ್‍ ಅವರು ಶನಿವಾರ (ಫೆ.29) ಡಿಕೆಶಿ ಅವರ ಮನೆಗೇ ತೆರಳಿ ಚರ್ಚೆ ನಡೆಸಿರುವುದರಿಂದ ಎಲ್ಲ ಊಹಾಪೋಹಗಳಿಗೆ ತೆರೆಬಿದ್ದಿದ್ದು, ಡಿಕೆಶಿ ಅವರು ಕೆಪಿಸಿಸಿ ಅಧ್ಯಕ್ಷರಾಗುವುದು ಖಚಿತ ಎನ್ನಲಾಗಿದೆ. ಒಂದೊಮ್ಮೆ ಇದು ನೆರವೇರದಿದ್ದಲ್ಲಿ ರಾಜ್ಯ ಕಾಂಗ್ರೆಸ್‍ನಲ್ಲಿ ಕೋಲಾಹಲದ ಪರಿಸ್ಥಿತಿ ಏರ್ಪಡುವಂತೂ ಶತಸ್ಸಿದ್ದ.


ಸಂಬಂಧಿತ ಟ್ಯಾಗ್ಗಳು

DK Shivakumar Congress KPCC Gulam Nabi Azad


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ