ಶೋಚನೀಯ ಸ್ಥಿತಿಯಲ್ಲಿ ಸುದ್ದಿ ವಾಹಿನಿಗಳು

News channels in distress

28-02-2020

ಬೆಂಗಳೂರು, ಫೆ.28: ವರ್ತಮಾನ ಪತ್ರಿಕೆಗಳು ಹಾಗೂ ನಿಯತಕಾಲಿಕಗಳನ್ನು ಓದುವವರ ಸಂಖ್ಯೆ ದಿನೇ ದಿನೇ ಕುಸಿಯುತ್ತಿದೆ ಎಂಬ ಮಾತುಗಳು ಬಹಳ ದಿನಗಳಿಂದ ಕೇಳಿಬರುತ್ತಿವೆ. ಒದುವ ಅಭಿರುಚಿ ತಗ್ಗುತ್ತಿರುವುದರ ಜತೆಗೆ ವಿದ್ಯುನ್ಮಾನ ಮಾಧ್ಯಮಗಳ ಭರಾಟೆ ಹೆಚ್ಚುತ್ತಿರುವುದು ಇದಕ್ಕೊಂದು ಕಾರಣ ಎಂದೆಲ್ಲ ಹೇಳಲಾಗಿತ್ತು.

ಆದರೆ ಸುದ್ದಿವಾಹಿನಿಗಳಿಗೂ ಇಂಥದೊಂದು ಸ್ಥಿತಿ ಒದಗಿದೆಯೇ ಎಂದು ಪ್ರಶ್ನಿಸಿಕೊಳ್ಳುವಂಥ ಕಾಲವೀಗ ಎದುರಾಗಿದೆ. ಈ ಅಭಿಪ್ರಾಯಕ್ಕೆ ಕಾರಣವಾಗಿರುವುದು ಪ್ರಸಕ್ತ ವರ್ಷದ ಫೆಬ್ರವರಿ 15ರಿಂದ 21ರವರೆಗಿನ ಕಾಲಾವಧಿಗೆ ದಕ್ಕಿರುವ ಒಂದು ಸಮೀಕ್ಷಾ ವರದಿ.

ಸಮೀಕ್ಷೆಯಲ್ಲಿ ದಕ್ಕಿರುವ ಗ್ರಾಸ್‍ ರೇಟಿಂಗ್‍ ಪಾಯಿಂಟ್‍ (GRP) ಅನ್ನು ಒಮ್ಮೆ ಅವಲೋಕಿಸಿದರೆ ಈ ಮಾತಿಗೆ ಪುಷ್ಟಿ ಸಿಗುತ್ತದೆ. ಇದರ ಅನುಸಾರ ಕನ್ನಡದ ಸುದ್ದಿವಾಹಿನಿಗಳು 100 GRPಯನ್ನು ದಾಟಲು ಏದುಸಿರು ಬಿಡುತ್ತಿರುವುದು ಸ್ಪಷ್ಟಗೋಚರವಾಗಿದೆ.

ಘಟನೆಗಳಿಗೆ ನೀಡುವ ಕ್ಷಿಪ್ರ ಸ್ಪಂದನೆ, ಸುದ್ದಿಯ ಪ್ರಸ್ತುತಿ, ಆಂಕರ್‍ಗಳ ಚುರುಕುತನ ಇತ್ಯಾದಿ ಬಾಬತ್ತುಗಳಲ್ಲಿ ಅಗ್ರಗಣ್ಯ ಎಂದೇ ಕರೆಯಲ್ಪಡುತ್ತಿದ್ದ ಟಿವಿ9 ವಾಹಿನಿಗೆ ಕರ್ನಾಟಕದಾದ್ಯಂತ ದಕ್ಕಿರುವ GRP 92 ಮಾತ್ರ ಎಂಬುದು ವಸ್ತುಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ನಂತರದ ಸ್ಥಾನಗಳಲ್ಲಿರುವ ಪಬ್ಲಿಕ್‍ ಟಿವಿ (51), ಸುವರ್ಣ ನ್ಯೂಸ್‍ (37), ನ್ಯೂಸ್‍ 18 ಕನ್ನಡ (26), ದಿಗ್ವಿಜಯ ನ್ಯೂಸ್‍ (16), ಟಿವಿ 5 ಕನ್ನಡ (8), ಬಿಟಿವಿ ನ್ಯೂಸ್‍ (6), ಕಸ್ತೂರಿ ನ್ಯೂಸ್‍ (5), ಪವರ್‍ ಟಿವಿ (5), ರಾಜ್‍ ನ್ಯೂಸ್‍ ಕನ್ನಡ (3) ಇವುಗಳ ಸ್ಥಿತಿಗತಿಯನ್ನು ಬಿಡಿಸಿ ಹೇಳಬೇಕಿಲ್ಲ.

ಈ ಅಂಕಿ-ಅಂಶಗಳು ಹೇಳಲು ಹೊರಟಿರುವುದು ಏನನ್ನು? ಮಾಧ್ಯಮ ಲೋಕದಲ್ಲಿ ನಡೆಯುತ್ತಿರುವುದಾದರೂ ಏನು? ಸಂಬಂಧಪಟ್ಟವರು ಈ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.


ಸಂಬಂಧಿತ ಟ್ಯಾಗ್ಗಳು

Kannada News Channels Suvarna News TV9 Public TV


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ