ರೈತನ ಹತಾಶೆ: ಟೊಮೆಟೊ ಬೀದಿಪಾಲು

ರೈತನ  ಹತಾಶೆ: ಟೊಮೆಟೊ ಬೀದಿಪಾಲು

28-02-2020

ಗಂಗಾವತಿ: ಕೃಷಿ ಉತ್ಪನ್ನಗಳ ಬೆಲೆ ಕುಸಿತದಿಂದ ಹಾಗೂ ಮಧ್ಯವರ್ತಿಗಳ ಕಾಟದಿಂದ ಹೈರಾಣಾಗಿರುವ ರೈತರು ಒಬ್ಬಿಬ್ಬರಲ್ಲ. ಇಂಥದೊಂದು ನಿದರ್ಶನ ಗಂಗಾವತಿಯಿಂದ ವರದಿಯಾಗಿದೆ.

ಬೆಲೆ ಕುಸಿತ ಹಾಗೂ ಸೂಕ್ತ ಬೆಲೆ ಸಿಗದ ಕಾರಣ ತೀವ್ರವಾಗಿ ನೊಂದ ಕೃಷಿಕನೊಬ್ಬ ತಾನು ಬೆಳೆದಿದ್ದ ಸುಮಾರು 400 ಕೆ.ಜಿ.ಯಷ್ಟು ಟೊಮೆಟೊವನ್ನು ಇಲ್ಲಿ ರಸ್ತೆಗೆ ಎಸೆದುಹೋಗಿದ್ದಾನೆ. ಗಂಗಾವತಿಯ ತರಕಾರಿ ಮಾರುಕಟ್ಟೆಗೆ ಕಂಪ್ಲಿಯಿಂದ ಅತೀವ ನಿರೀಕ್ಷೆಯೊಂದಿಗೆ ಬಂದಿದ್ದ ಈ ರೈತ, ಕೆ.ಜಿ.ಗೆ ಐವತ್ತು ಪೈಸೆಯಿಂದ ಒಂದು ರೂಪಾಯಿ ದರದಂತೆ ಟೊಮೆಟೊ ಖರೀದಿಸುವುದಾಗಿ ಇಲ್ಲಿನ ದಲ್ಲಾಳಿಗಳು ಹೇಳಿದ್ದು ಕೇಳಿ ಹತಾಶನಾದ ಎನ್ನಲಾಗಿದೆ.

ತಾನು ಹೊಲದಲ್ಲಿ ವಹಿಸಿದ ಶ್ರಮ, ಬೆಳೆಯ ಕಟಾವಿಗೆ ನೀಡಿದ ಕೂಲಿ, ಸಾಗಣೆ ವೆಚ್ಚಗಳನ್ನು ಲೆಕ್ಕ ಹಾಕಿದರೆ ತನಗೆ ದಕ್ಕುತ್ತಿರುವ ಪ್ರತಿಫಲ ಏನೇನೂ ಅಲ್ಲ ಎಂದು ಅಸಮಾಧಾನಗೊಂಡ ಆ ರೈತ, ಗಂಗಾವತಿಯ ವಿದ್ಯಾನಗರದ ರೈಲ್ವೆ ಗೇಟ್‍ ಬಳಿಯ ಸೇತುವೆಯಡಿ ಅಷ್ಟೂ ಟೊಮೆಟೊವನ್ನು ಸುರಿದುಹೋದ ಎನ್ನಲಾಗಿದೆ.


ಸಂಬಂಧಿತ ಟ್ಯಾಗ್ಗಳು

Farmer Tomato distress no support price


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ