ಜಿಐಸ್ಯಾಟ್-1 ಉಡಾವಣೆಗೆ ಇಸ್ರೋ ಸಜ್ಜು

GIsat-1 to be launched on March 5th

27-02-2020

ಬೆಂಗಳೂರು, ಫೆ.27: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತೊಂದು ಸಾಹಸಕ್ಕೆ ತುದಿಗಾಲಲ್ಲಿ ನಿಂತಿದೆ. ಮಾರ್ಚ್‍ 5ರ ಸಂಜೆ 5:43ಕ್ಕೆ ‘ಜಿಐಸ್ಯಾಟ್‍-1’ ಉಪಗ್ರಹದ ಉಡಾವಣೆ ನಡೆಯಲಿದ್ದು, ಇದಕ್ಕಾಗಿ ಶ್ರೀಹರಿಕೋಟಾದ ಸತೀಶ್‍ ಧವನ್‍ ಬಾಹ್ಯಾಕಾಶ ಕೇಂದ್ರ ಸನ್ನದ್ಧವಾಗಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.

2,275 ಕೆ.ಜಿ. ತೂಕದ ಈ ಉಪಗ್ರಹ, ಕ್ಷಿಪ್ರವಾಗಿ ಭೂಮಿಯ ಮೇಲ್ಮೈಯನ್ನು ಅವಲೋಕಿಸುವ ವೈಶಿಷ್ಟ್ಯವನ್ನು ಹೊಂದಿದ್ದು, ಜಿಎಸ್‍ಎಲ್‍ವಿ-10 ಉಡಾವಣಾ ವಾಹನದ ಮೂಲಕ ಭೂಸ್ಥಾಯಿ ಕಕ್ಷೆಗೆ ಸೇರ್ಪಡೆಗೊಳ್ಳಲಿದೆ ಎಂದು ತಿಳಿದುಬಂದಿದೆ.

ಏಳು ವರ್ಷಗಳ ಜೀವಿತಾವಧಿ ಹೊಂದಿರುವ ‘ಜಿಐಸ್ಯಾಟ್‍-1’ ಉಪಗ್ರಹ ಉನ್ನತ ತಂತ್ರಜ್ಞಾನದ ಐದು ಕ್ಯಾಮರಾಗಳನ್ನು ಹೊಂದಿದ್ದು, ಪ್ರಾಕೃತಿಕ ವಿಕೋಪ, ಯುದ್ಧ ಮುಂತಾದ ಸಂದರ್ಭಗಳಲ್ಲಿ ಮಹತ್ವದ ಚಿತ್ರಗಳನ್ನು ರವಾನಿಸಲಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.


ಸಂಬಂಧಿತ ಟ್ಯಾಗ್ಗಳು

ISRO Sriharikota GIsat Satish Dhawan Space Centre


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ