ಕೊರೋನಾ ಭೀತಿ: ‘ರಾಬರ್ಟ್’ ಚಿತ್ರೀಕರಣ ರದ್ದು

Robert song shooting cancelled

27-02-2020

ಚೀನಾ ಸೇರಿದಂತೆ ವಿಶ್ವದ ವಿವಿಧೆಡೆ ಸಾವಿರಾರು ಮಂದಿಯ ಸಾವಿಗೆ, ಅಸ್ವಸ್ಥತೆಗೆ ಕಾರಣವಾಗಿರುವ ಕೊರೋನಾ ವೈರಸ್‍ ಕನ್ನಡ ಚಿತ್ರರಂಗದ ಪಾಲಿಗೂ ತಡೆಗೋಡೆಯಾಗಿ ಪರಿಣಮಿಸಿದೆ.

ದರ್ಶನ್‍ ಅಭಿನಯದ ‘ರಾಬರ್ಟ್‍’ ಚಿತ್ರದ ಹಾಡೊಂದರ ಚಿತ್ರೀಕರಣ ಸ್ಪೇನ್‍ನಲ್ಲಿ ನಡೆಯಬೇಕಿದ್ದುದು, ಕೊರೋನಾ ವೈರಸ್‍ ಹರಡಿಕೆಯ ಭೀತಿಯಿಂದಾಗಿ ಅದು ರದ್ದಾಗಿದೆ ಎಂದು ತಿಳಿದುಬಂದಿದೆ.

ಕಥೆಯಲ್ಲಿ ಆಕ್ಷನ್‍-ಥ್ರಿಲ್ಲರ್‍ ಅಂಶಗಳ ಜತೆಜತೆಗೆ ಭಾವನಾತ್ಮಕ ಮಗ್ಗುಲುಗಳನ್ನೂ ಹೊಂದಿರುವ ‘ರಾಬರ್ಟ್‍’ ಚಿತ್ರ, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಚಾಲೆಂಜಿಂಗ್ ಸ್ಟಾರ್‍ ದರ್ಶನ್‍ ಅವರಿಗೆ ಎದುರಾಗಿ ಖ್ಯಾತ ನಟ ಜಗಪತಿಬಾಬು ಕಾಣಿಸಿಕೊಳ್ಳಲಿರುವ ಈ ಚಿತ್ರದ ಉಳಿದ ಪಾತ್ರಗಳಲ್ಲಿ ವಿನೋದ್‍ ಪ್ರಭಾಕರ್, ಸೋನಲ್‍ ಮಂತೆರೋ, ಶಿವರಾಜ್‍ ಕೆ.ಆರ್‍.ಪೇಟೆ, ಚಿಕ್ಕಣ್ಣ, ರವಿಶಂಕರ್‍, ರವಿ ಕಿಶನ್‍ ಮುಂತಾದವರಿದ್ದಾರೆ. ಚಿತ್ರಕ್ಕೆ ತರುಣ್ ಸುಧೀರ್‍ ನಿರ್ದೇಶನ, ಅರ್ಜುನ್‍ ಜನ್ಯ ಸಂಗೀತವಿದೆ.


ಸಂಬಂಧಿತ ಟ್ಯಾಗ್ಗಳು

Darshan Robert Tarun Sudheer Corona Virus


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ