ಚಿತ್ತಾಕರ್ಷಕ ವಿನ್ಯಾಸದ ಟೊಯೊಟಾ ‘ವೆಲ್ಫೈರ್’

Toyota Welfire released

27-02-2020

ದಿನಗಳೆದಂತೆ ಐಷಾರಾಮಿ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲೇ, ಈ ಶ್ರೇಣಿಗೆ ಸೇರುವ ಟೊಯೊಟಾ ಸಂಸ‍್ಥೆಯ ಬಹು ನಿರೀಕ್ಷಿತ ‘ವೆಲ್‍ಫೈರ್‍’ ಎಂಪಿವಿ (Multi Purpose Vehicle) ಕಾರು ಭಾರತದಲ್ಲಿ ಬಿಡುಗಡೆಗೊಂಡಿದೆ.

ಲಭ್ಯವಿರುವ ಎಂಪಿವಿ ಕಾರುಗಳ ಪೈಕಿ ಅತಿಹೆಚ್ಚು ವೈಶಿಷ್ಟ್ಯಗಳನ್ನು ವೆಲ್‍ಫೈರ್‍ ಹೊಂದಿದ್ದು, 79.50 ಲಕ್ಷ ರೂಪಾಯಿ ಬೆಲೆಯನ್ನು ಹೊಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಕಾರು ಈಗಾಗಲೇ 6 ಲಕ್ಷ ಸಂಖ್ಯೆಯಲ್ಲಿ ಮಾರಾಟವಾಗಿದ್ದು, ಭಾರತದಲ್ಲಿ ಬಿಡುಗಡೆಗೂ ಮುನ್ನವೇ 180 ಕಾರುಗಳ ಬುಕಿಂಗ್‍ ಆಗಿದೆ ಎಂದು ತಿಳಿದುಬಂದಿದೆ.

ಸ್ಪ್ಲಿಟ್‍ ಎಲ್‍ಇಡಿ ಹೆಡ್‍ಲೈಟ್‍ಗಳು, ಗಟ್ಟಿಮುಟ್ಟಾದ ಬಂಪರ್‍, ಎಲೆಕ್ಟ್ರಿಕ್‍ ಸ್ಲೈಡಿಂಗ್‍ ಬಾಗಿಲುಗಳು, 7 ಆಸನ ಸೌಲಭ್ಯ, ವೈ-ಫೈ ಸೌಲಭ್ಯ, 17 ಸ್ಪೀಕರ್‍ಗಳಿರುವ ಜೆಬಿಎಲ್‍ ಆಡಿಯೋ ಸಿಸ್ಟಂ ಸೇರಿದಂತೆ ಇನ್ನೂ ಅನೇಕ ವೈಶಿಷ್ಟ್ಯಗಳನ್ನು ಹೊಂದಿರುವ ಈ ಕಾರು, ಪ್ರಸ್ತುತ ವೈಟ್ ಪರ್ಲ್‍, ಬರ್ನಿಂಗ್‍ ಬ್ಲ್ಯಾಕ್‍, ಗ್ರಾಫೈಟ್‍ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ ಎನ್ನಲಾಗಿದೆ.


ಸಂಬಂಧಿತ ಟ್ಯಾಗ್ಗಳು

Toyota welfire MPV vehicle Luxury Car


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ