ಟೆನಿಸ್ ಆಟಕ್ಕೆ ಶರಪೋವಾ ಶುಭವಿದಾಯ

Sharapova says good bye to tennis

27-02-2020

ಪ್ಯಾರಿಸ್‍: ಟೆನಿಸ್‍ ಕ್ರೀಡೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದ ರಷ್ಯಾದ ಮರಿಯಾ ಶರಪೋವಾ ಅಂತಾರಾಷ್ಟ್ರೀಯ ಟೆನಿಸ್‍ಗೆ ವಿದಾಯ ಹೇಳಿದ್ದಾರೆ.

ಐದು ಗ್ರ್ಯಾಂಡ್‍ ಸ್ಲ್ಯಾಮ್‍ ಸಿಂಗಲ್ಸ್‍ ಪ್ರಶಸ್ತಿಗಳನ್ನು ಗೆದ್ದ ಸಾಧನೆ ಮಾಡಿರುವ 32 ವರ್ಷದ ಶರಪೋವಾ, ಟೆನಿಸ್‍ ಆಟಕ್ಕೆ ಗ್ಲಾಮರ್‍ ಮತ್ತು ರೋಚಕತೆಯ ಸ್ಪರ್ಶ ನೀಡಿದಾಕೆ. ಜತೆಗೆ ರೂಪದರ್ಶಿಯಾಗಿಯೂ ಮಿಂಚಿದವರು.

ಕ್ರಿಕೆಟ್‍ ಆಟದ ಮೂಲಕ ವಿಶ್ವವಿಖ್ಯಾತರಾಗಿರುವ ಸಚಿನ್‍ ತೆಂಡೂಲ್ಕರ್‍ ಕುರಿತಾದ ಪ್ರಶ್ನೆಯೊಂದಕ್ಕೆ ‘ಆತ ಯಾರೆಂದೇ ನನಗೆ ಗೊತ್ತಿಲ್ಲ’ ಎನ್ನುವ ಮೂಲಕ ಶರಪೋವಾ ವಿವಾದ ಹುಟ್ಟುಹಾಕಿದ್ದರ ಜತೆಗೆ ಸಚಿನ್‍ ಅಭಿಮಾನಿಗಳ ಅಸಮಾಧಾನಕ್ಕೂ ಕಾರಣರಾಗಿದ್ದರು.

ನಿಷೇಧಿತ ಮದ್ದು ಸೇವಿಸಿ ಡ್ರಗ್‍ ಟೆಸ್ಟ್‍ನಲ್ಲಿ ವಿಫಲರಾದ ಕಾರಣ ಶರಪೋವಾ 2 ವರ್ಷ ಅವಧಿಗೆ ಅಮಾನತು ಶಿಕ್ಷೆಗೊಳಗಾಗಿದ್ದರು. ತರುವಾಯ ನ್ಯಾಯಾಲಯದ ಮೊರೆಹೋಗಿ ಶಿಕ್ಷೆಯ ಪ್ರಮಾಣವನ್ನು 15 ತಿಂಗಳಿಗೆ ಇಳಿಸಿಕೊಂಡು ಟೆನಿಸ್‍ ಅಂಕಣದಲ್ಲಿ ಮತ್ತೊಮ್ಮೆ ರಾರಾಜಿಸಿದ್ದರು ಎಂಬುದನ್ನಿಲ್ಲಿ ಸ್ಮರಿಸಬಹುದು.


ಸಂಬಂಧಿತ ಟ್ಯಾಗ್ಗಳು

Maria Sharapova Tennis Good bye Grand Slam winner


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ