ಅರ್ಜುನ್ ಜನ್ಯರಿಗೆ ಲಘು ಹೃದಯಾಘಾತ

Arjun Janya hospitalised

27-02-2020

ಮೈಸೂರು, ಫೆ.27: ‘ಮ್ಯಾಜಿಕಲ್‍ ಕಂಪೋಸರ್’ ಎಂದೇ ಹೆಸರಾದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೆ ಬುಧವಾರ (ಫೆ.26) ಮಧ್ಯರಾತ್ರಿ ಲಘು ಹೃದಯಾಘಾತ ಸಂಭವಿಸಿದ್ದು, ಇಲ್ಲಿನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ.

ಮೈಸೂರಿನ ಹೊರವಲಯದಲ್ಲಿರುವ ಬೋಗಾದಿ ಎಂಬಲ್ಲಿ ಐಷಾರಾಮಿ ಮನೆಯೊಂದನ್ನು ಖರೀದಿಸಿದ್ದ ಅರ್ಜುನ್‍ ರಾತ್ರಿ ಅಲ್ಲಿಯೇ ತಂಗಿದ್ದರು. ಮಧ್ಯರಾತ್ರಿ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದ್ದರಿಂದ ಕುಟುಂಬಿಕರು ಅವರನ್ನು ಅಪೊಲೊ ಆಸ್ಪತ್ರೆಗೆ ದಾಖಲಿಸಿದರು. ರಾತ್ರಿಯೇ ಅವರಿಗೆ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ತಮ್ಮ ವಿನೂತನ ರಾಗ ಸಂಯೋಜನೆಯ ಮೂಲಕ ಕ್ಷಿಪ್ರ ಅವಧಿಯಲ್ಲಿ ಜನಪ್ರಿಯತೆ ಗಳಿಸಿದ ಅರ್ಜುನ್‍ ಜನ್ಯ, ಇದುವರೆಗೆ ನೂರಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದ್ದು ಅವುಗಳ ಪೈಕಿ ‘ಬಿರುಗಾಳಿ’, ‘ಕೆಂಪೇಗೌಡ’, ‘ಭಜರಂಗಿ’, ‘ವಜ್ರಕಾಯ’, ‘ಮುಕುಂದ ಮುರಾರಿ’, ‘ರಾಂಬೋ’ ಹೆಚ್ಚು ಜನಪ್ರಿಯವಾಗಿವೆ. ಖಾಸಗಿ ವಾಹಿನಿಯೊಂದು ನಡೆಸುವ ಗಾಯನದ ರಿಯಾಲಿಟಿ ಷೋನಲ್ಲಿಯೂ ಅವರು ತೀರ್ಪುಗಾರರ ಪೈಕಿ ಒಬ್ಬರಾಗಿದ್ದಾರೆ ಎಂಬುದು ಗಮನಾರ್ಹ.


ಸಂಬಂಧಿತ ಟ್ಯಾಗ್ಗಳು

Arjun Janya Heart Attack Music Director Apollo Hospital


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ