ಬೆಳ್ಳಿತೆರೆಯಲ್ಲಿ ಗಂಗೂಲಿ ಗಾಥೆ!

Ganguli biopic

26-02-2020

ಬೆಳ್ಳಿತೆರೆಯ ಮಂದಿಗೆ ಕ್ರಿಕೆಟ್‍ ಮೋಹ ಬಿಟ್ಟಂತೆ ಕಾಣುತ್ತಿಲ್ಲ. 1983ರ ವಿಶ್ವಕಪ್‍ ಪಂದ್ಯಾವಳಿಯಲ್ಲಿ ಭಾರತ ತಂಡ ದಾಖಲಿಸಿದ ಐತಿಹಾಸಿಕ ಗೆಲುವನ್ನು ಸೆಲ್ಯುಲಾಯ್ಡ್‍ ಮೇಲೆ ಉಣಬಡಿಸಲು ಚಿತ್ರೋದ್ಯಮಿಗಳು ಉತ್ಸುಕರಾದ ಪರಿಣಾಮ ‘83’ ಎಂ ಶೀರ್ಷಿಕೆಯ ಚಲನಚಿತ್ರ ಮೂಡಿಬರಲಿರುವುದು ಈಗಾಗಲೇ ಜಗಜ್ಜಾಹೀರು. ರಣವೀರ್‍ ಸಿಂಗ್‍ ಅವರು ಕ್ರಿಕೆಟಿಗ ಕಪಿಲ್‍ ದೇವ್‍ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಚಿತ್ರವಿದು.

ಮಿಕ್ಕಂತೆ, ಸಚಿನ್‍ ತೆಂಡೂಲ್ಕರ್‍, ಮೊಹಮ್ಮದ್‍ ಅಜರುದ್ದೀನ್‍, ಮಹೇಂದ್ರ ಸಿಂಗ್‍ ಧೋನಿ ಮೊದಲಾದವರ ಜೀವನ ಚರಿತ್ರೆಗಳು ಈಗಾಗಲೇ ಬೆಳ್ಳಿತೆರೆಯ ಮೇಲೆ ರಾರಾಜಿಸಿವೆ. ಈ ಸಾಲಿಗೆ ಸೇರಲಿದೆ ಟೀಮ್‍ ಇಂಡಿಯಾ ಮಾಜಿ ನಾಯಕ ಸೌರವ್‍ ಗಂಗೂಲಿ ಕುರಿತಾದ ಚಿತ್ರ.

ಬಾಲಿವುಡ್‍ನ ಖ್ಯಾತ ನಿರ್ದೇಶಕ-ನಿರ್ಮಾಪಕ ಕರಣ್‍ ಜೋಹರ್‍ ಅವರು ಈ ಕುರಿತಾದ ಚಚರ್ಚೆಗೆ ಈಗಾಗಲೇ ಗಂಗೂಲಿಯವರನ್ನು ಭೇಟಿಯಾಗಿದ್ದು, ಕಥಾನಾಯಕನಾಗಿ ಹೃತಿಕ ರೋಷನ್‍ ನಟಿಸಿದರೆ ಹೇಗಿರಬಹುದು ಎಂಬ ಕುರಿತಾಗಿ ಚಿಂತನ-ಮಂಥನ ನಡೆಯುತ್ತಿದೆಯಂತೆ.

ಇದೇ ರೀತಿಯಲ್ಲಿ, ಮತ್ತೊಬ್ಬ ಜನಪ್ರಿಯ ಕ್ರಿಕೆಟಿಗ ಯುವರಾಜ್‍ ಸಿಂಗ್‍ ಬದುಕು ಕೂಡ ಬೆಳ್ಳಿತೆರೆಯನ್ನು ಆವರಿಸಲಿದೆ ಎಂಬ ಸುದ್ದಿಯಿದೆ. ಮಹಿಳಾ ಕ್ರಿಕೆಟ್‍ನಲ್ಲಿ ಮಿಂಚುತ್ತಿರುವ ಭಾರತದ ಮಿಥಾಲಿ ರಾಜ್‍ ಜೀವನಚರಿತ್ರೆಯೂ ‘ಶಭಾಶ್‍ ಮಿಥು’ ಎಂಬ ಹೆಸರಿನಲ್ಲಿ ಚಲನಚಿತ್ರವಾಗುತ್ತಿದ್ದು ಮಿಥಾಲಿ ಪಾತ್ರದಲ್ಲಿ ತಾಪ್ಸಿ ಪನ್ನು ಕಾಣಿಸಿಕೊಳ್ಳುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Biopic Shabhash Mithali Sourav Ganguli Sachin Tendulkar


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ