ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಕಟ

Janapada Academy Awards announced

26-02-2020

ಉಡುಪಿ, ಫೆಬ್ರವರಿ 26: ಕರ್ನಾಟಕ ಜಾನಪದ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪ್ರಕಟಗೊಂಡಿದೆ. ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಮಂಜಮ್ಮ ಜೋಗತಿಯವರು ಇಲ್ಲಿನ ಪ್ರೆಸ್ ಕ್ಲಬ್‍ನಲ್ಲಿ ಪ್ರಶಸ್ತಿ ವಿಜೇತರ ಪಟ್ಟಿ ಬಿಡುಗಡೆ ಮಾಡಿದರು. ಪ್ರಶಸ್ತಿ ಪುರಸ್ಕೃತರ ಪಟ್ಟಿ ಹೀಗಿದೆ:

* ಬೆಂಗಳೂರು ನಗರ:  ಗೌರಮ್ಮ (ಜಾನಪದ ಗಾಯಕಿ)

* ಬೆಂಗಳೂರು ಗ್ರಾಮಾಂತರ: ಲಕ್ಷ್ಮಮ್ಮ (ಭಜನೆ ಪದಗಳು)

* ಬಳ್ಳಾರಿ: ವೇಷಗಾರ ಮೋತಿ ರಾಮಣ್ಣ (ಹಗಲುವೇಷ)

* ಬೆಳಗಾವಿ: ಸಂಕಮ್ಮ (ಸಂಪ್ರದಾಯದ ಪದ )

* ಬಾಗಲಕೋಟೆ: ರುಕ್ಮಿಣಿ ಮಲ್ಲಪ್ಪ (ಹರನಾಳ ಮದುವೆ ಹಾಡು )

* ಬೀದರ್: ತುಳಸಿ ರಾಮ ಭೀಮರಾವ್ ಸುತಾರ್ (ಆಲದ ಎಲೆಯಿಂದ ಸಂಗೀತ)

* ಚಿತ್ರದುರ್ಗ: ತಿಪ್ಪಣ್ಣ (ಗೊರವರ ಕುಣಿತ)

* ಚಿಕ್ಕಬಳ್ಳಾಪುರ: ಮುನಿರೆಡ್ಡಿ (ಜಾನಪದ ಗಾಯನ )

* ಚಾಮರಾಜನಗರ: ಗೌರಮ್ಮ (ಸೋಬಾನೆ ಪದ )

* ಚಿಕ್ಕಮಗಳೂರು: ಡಾಕ್ಟರ್ ಎಚ್ ಸಿ ಈಶ್ವರ ನಾಯಕ (ನಾಟಿವೈದ್ಯ )

* ದಕ್ಷಿಣ ಕನ್ನಡ: ರುಕ್ಮಯ ಗೌಡ (ಸಿದ್ದವೇಷ )

* ದಾವಣಗೆರೆ: ಪಿ ಜಿ ಪರಮೇಶ್ವರಪ್ಪ (ವೀರಗಾಸೆ)

* ಧಾರವಾಡ: ಮಲ್ಲಯ್ಯ ರಾಚಯ್ಯ (ತೋಟಗಂಟಿ ಜಾನಪದ ಸಂಗೀತ)

* ಹಾಸನ: ಕಪಿನಿ ಗೌಡ ಕೆ (ಕೋಲಾಟ )

* ಹಾವೇರಿ: ಹನುಮಂತಪ್ಪ ಧಾರವಾಡ (ಭಜನೆ ಕೋಲಾಟ)

* ಕಲಬುರ್ಗಿ: ಗಂಗಾಧರಯ್ಯ ಅಗ್ಗಿಮಠ (ಪುರುವಂತಿಕೆ )

* ಕೊಡಗು: ಜಿಕೆ ರಾಮು (ಕೊಡವರ ಕುಣಿತ )

* ಕೊಪ್ಪಳ: ಶಾಂತವ್ವ ಲಕ್ಷ್ಮಪ್ಪ ಲಮಾಣಿ (ಲಮಾಣಿ ನೃತ್ಯ)

* ಕೋಲಾರ: ಅಂಗಡಿ ವೆಂಕಟೇಶಪ್ಪ (ತತ್ವಪದ )

* ಗದಗ: ನಾಗರಾಜ ನೀ ಜಕ್ಕಮ್ಮ (ನವರ್ ಗೀಗಿ ಪದ)

* ಮೈಸೂರು: ಮಾದಶೆಟ್ಟಿ (ಕಂಸಾಳೆ ಕುಣಿತ )

* ಮಂಡ್ಯ: ಸ್ವಾಮಿಗೌಡ (ಬೀಸುವ ಪದಗಳು )

* ರಾಮನಗರ: ಅಂಕನಹಳ್ಳಿ ಶಿವಣ್ಣ (ಪೂಜಾ ಕುಣಿತ)

* ರಾಯಚೂರು: ಶ್ರೀ ಸೂಗಪ್ಪ ನಾಗಪ್ಪ (ತತ್ವಪದ )

* ಶಿವಮೊಗ್ಗ: ಜಿಸಿ ಮಂಜಪ್ಪ (ಡೊಳ್ಳುಕುಣಿತ )

* ತುಮಕೂರು: ರಂಗಯ್ಯ (ಜಾನಪದ ಗೀತೆ)

* ಉಡುಪಿ: ಸಾಧು ಪಾಣಾರ (ಭೂತ ಕೋಲ )

* ಉತ್ತರಕನ್ನಡ: ಶ್ರೀಮತಿ ಹುಸೇನಬಿ ಬುಡನ್ ಸಾಬ್ ಸಿದ್ದಿ ಸಿದ್ದಿ ಡಮಾಮಿ ನೃತ್ಯ

* ವಿಜಯಪುರ: ನಿಮ್ಮವ್ವ ಕೆಂಚಪ್ಪ ಗುಬ್ಬಿ (ಸೋಬಾನೆ ಪದ )

* ಯಾದಗಿರಿ: ಶಿವಮೂರ್ತಿ ತನಿಖೆದಾರ (ಗೀಗಿ ಪದ)

 

ಜನಪದ ತಜ್ಞ ಪ್ರಶಸ್ತಿ:

* ಕಲಬುರ್ಗಿಯ ಬಸವರಾಜ ಪೊಲೀಸ್ ಪಾಟೀಲ್ ( ಡಾಕ್ಟರ್ ಬಿ.ಎಸ್, ಗದ್ದಗಿಮಠ ತಜ್ಞ ಪ್ರಶಸ್ತಿ)

* ರಾಮನಗರದ ಡಾ. ಚಕ್ಕೆರೆ ಶಿವಶಂಕರ್ (ಡಾಕ್ಟರ್ ಜಿ.ಶಂ. ಪರಮಶಿವಯ್ಯ ಪ್ರಶಸ್ತಿ)

ಪ್ರಶಸ್ತಿ ವಿಜೇತರೆಲ್ಲರಿಗೂ ‘ಸೂಪರ್‍ ಸುದ್ದಿ’ಯ ಅಭಿನಂದನೆಗಳು.


ಸಂಬಂಧಿತ ಟ್ಯಾಗ್ಗಳು

Janapada Academy Manjamma Jogati Udupi Press Club


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ