ರದ್ದಾಗುತ್ತದೆಯೇ ಟೋಕಿಯೋ ಒಲಿಂಪಿಕ್ಸ್?

Tokyo olympics gets cancelled?

26-02-2020

ಟೋಕಿಯೋ, ಫೆ.26: ಮಾರಣಾಂತಿಕವಾಗಿ ಪರಿಣಮಿಸಿರುವ ಕೊರೊನಾ ವೈರಸ್‍ನ ಒಂದೊಮ್ಮೆ ನಿಯಂತ್ರಣಕ್ಕೆ ಬಾರದಿದ್ದಲ್ಲಿ, ಪ್ರಸಕ್ತ ವರ್ಷ ಜಪಾನಿನ ಟೋಕಿಯೋದಲ್ಲಿ ನಡೆಯಬೇಕಿರುವ ಒಲಿಂಪಿಕ್ಸ್ ಕ್ರೀಡಾಕೂಟ ರದ್ದಾಗಲಿದೆಯೇ? ಹಾಗೊಂದು ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ಕ್ರೀಡಾಕೂಟವನ್ನು ಮುಂದೂಡುವ ಅಥವ ಮತ್ತೊಂದೆಡೆಗೆ ಸ್ಥಳಾಂತರಿಸುವ ಬದಲು ಅದನ್ನು ರದ್ದುಪಡಿಸುವ ಸಾಧ್ಯತೆಯೇ ಹೆಚ್ಚು ಎಂದು ಸುದ್ದಿಮೂಲಗಳು ತಿಳಿಸಿವೆ. ಸದ್ಯಕ್ಕೆ ಈ ಕುರಿತಾದ ಯಾವುದೇ ನಿರ್ಣಯ ಹೊರಬಿದ್ದಿಲ್ಲ, ಮೇ ತಿಂಗಳವರೆಗೆ ಕಾದುನೋಡಬೇಕಾಗಬಹುದು ಎನ್ನಲಾಗಿದೆ. ಒಲಿಂಪಿಕ್ಸ್ ಕ್ರೀಡಾಕೂಟವನ್ನು 2020ರ ಜುಲೈ 24ರಿಂದ ಆಗಸ್ಟ್‍ 9ರವರೆಗೆ ನಡೆಸಲು ಈ ಹಿಂದೆ ನಿರ್ಧರಿಸಲಾಗಿತ್ತು.

ಚೀನಾದ ಉದ್ದಗಲಕ್ಕೂ ಹಬ್ಬುತ್ತಿರುವ ಕೊರೊನಾ ವೈರಸ್‍ ಸೋಂಕಿಗೆ ಒಳಗಾಗಿರುವವರ ಮತ್ತು ಅಸುನೀಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಜಪಾನ್‍ನಲ್ಲೂ ಈಗಾಗಲೇ 4 ಮಂದಿ ಸಾವನ್ನಪ್ಪಿದ್ದಾರೆ ಎಂಬುದನ್ನಿಲ್ಲಿ ಸ್ಮರಿಸಬಹುದು.


ಸಂಬಂಧಿತ ಟ್ಯಾಗ್ಗಳು

Olympics Corona virus Tokyo Japan


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ