ಮೂವರಿಗೆ ಸದ್ಯದಲ್ಲೇ ಸಚಿವಭಾಗ್ಯ

Ministership to another three

26-02-2020

ನವದೆಹಲಿ, ಫೆ.26: ಬಜೆಟ್‍ ಅಧಿವೇಶನದ ನಂತರ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಶಾಸಕ ಉಮೇಶ್‍ ಕತ್ತಿ ಸೇರಿದಂತೆ ಮೂವರಿಗೆ ಮಂತ್ರಿಗಿರಿ ಲಭಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್‍. ಯಡಿಯೂರಪ್ಪ ತಿಳಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೋನಲ್ಡ್‍ ಟ್ರಂಪ್‍ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ಸಂಜೆ ಏರ್ಪಡಿಸಲಾಗಿದ್ದ ಭೋಜನಕೂಟದಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಮಾಧ್ಯಮಮಿತ್ರರೊಂದಿಗೆ ಮಾತನಾಡುತ್ತಿದ್ದ ಅವರು, ಅನ್ಯ ಪಕ್ಷಗಳಿಂದ ಬಂದಿರುವ 10 ಶಾಸಕರಿಗೆ ಈಗಾಗಲೇ ಮಂತ್ರಿಗಿರಿ ನೀಡಲಾಗಿದೆ. ಇನ್ನೇನಿದ್ದರೂ ಬಿಜೆಪಿಯ ಸಚಿವಾಕಾಂಕ್ಷಿಗಳಿಗೆ ಅವಕಾಶ ಎಂದು ತಿಳಿಸಿದರು.

ಪ್ರಸ್ತುತ ಯಡಿಯೂರಪ್ಪ ಸಂಪುಟದಲ್ಲಿ ಮೂರು ಸಚಿವ ಸ್ಥಾನಗಳು ಖಾಲಿಯಿದ್ದು, ಹಿರಿಯರು ಮತ್ತು ಮೂಲ ಬಿಜೆಪಿಗರಿಗೆ ಇವು ದಕ್ಕುವ ಸಾಧ್ಯತೆಯಿದೆ ಎಂಬ ಸುದ್ದಿ ರಾಜಕೀಯ ಪಡಸಾಲೆಗಳಲ್ಲಿ ಇತ್ತೀಚೆಗೆ ಕೇಳಿಬರುತ್ತಿತ್ತು. ಈ ಪೈಕಿ ಹುಕ್ಕೇರಿ ಶಾಸಕ ಉಮೇಶ್‍ ಕತ್ತಿ ಹೆಸರು ಖಾತ್ರಿಯಾಗಿದ್ದು, ಮಿಕ್ಕೆರಡು ಅದೃಷ್ಟಶಾಲಿಗಳು ಯಾರು ಎಂಬುದು ರಾಜಕೀಯಾಸಕ್ತರಲ್ಲಿ ಕುತೂಹಲ ಮೂಡಿಸಿದೆ.


ಸಂಬಂಧಿತ ಟ್ಯಾಗ್ಗಳು

Yediyurappa Ministership Umesh Katti Budget Session


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ