ವಿಶ್ವ ಚಲನಚಿತ್ರೋತ್ಸವದಲ್ಲಿ ಮಿಂಚಲಿರುವ ‘ಅಮೃತಮತಿ’

Amrutamati in Noida film festival

26-02-2020

ನೋಯ್ಡಾದಲ್ಲಿ ಹಮ್ಮಿಕೊಳ್ಳಲಾಗಿರುವ ನಾಲ್ಕನೇ ಭಾರತೀಯ ವಿಶ್ವ ಚಲನಚಿತ್ರೋತ್ಸವದ ಸ್ಪರ್ಧಾ ವಿಭಾಗದಲ್ಲಿನ ಪ್ರದರ್ಶನಕ್ಕೆ ಕನ್ನಡದ ‘ಅಮೃತಮತಿ’ ಚಿತ್ರ ಆಯ್ಕೆಯಾಗಿದೆ. ಉತ್ತಮ ಚಿತ್ರ, ಉತ್ತಮ ನಿರ್ದೇಶಕ ಹಾಗೂ ಉತ್ತಮ ನಟಿ ಈ ವಿಭಾಗಗಳಲ್ಲಿ ಚಿತ್ರ ಸ್ಪರ್ಧಿಸಲಿದೆ ಎಂದು ತಿಳಿದುಬಂದಿದೆ.

ಜನ್ನನ ‘ಯಶೋಧರ ಚರಿತ’ ಕಾವ್ಯವನ್ನು ಆಧರಿಸಿ ರೂಪುಗೊಂಡಿರುವ ಈ ಚಿತ್ರವನ್ನು ಬರಗೂರು ರಾಮಚಂದ್ರಪ್ಪನವರು ನಿರ್ದೇಶಿಸಿದ್ದು, ಅಮೃತಮತಿ ಪಾತ್ರದಲ್ಲಿ ಹರಿಪ್ರಿಯ, ಯಶೋಧರನಾಗಿ ಕಿಶೋರ್‍ ನಟಿಸಿದ್ದಾರೆ. ಮಿಕ್ಕ ಪಾತ್ರಗಳಲ್ಲಿ ಸುಂದರ್‍ ರಾಜ್‍, ತಿಲಕ್‍, ಅಂಬರೀಷ್‍ ಸಾರಂಗಿ, ಪ್ರಮೀಳಾ ಜೋಷಾಯ್‍, ವತ್ಸಲಾ ಮೋಹನ್‍, ಸುಪ್ರಿಯಾ ರಾವ್‍, ಭೂಮಿಕಾ ಲಕ್ಷ್ಮೀನಾರಾಯಣ ಕಾಣಿಸಿಕೊಂಡಿದ್ದಾರೆ.

‘ಅಮೃತಮತಿ’ ಚಿತ್ರವನ್ನು ನಿರ್ದೇಶಿಸಿರುವ ಬರಗೂರು ರಾಮಚಂದ್ರಪ್ಪ ಅವರು ಈಗಾಗಲೇ ‘ಒಂದು ಊರಿನ ಕಥೆ’, ‘ಬೆಂಕಿ’, ‘ಕೋಟೆ’, ‘ಸೂರ್ಯ’, ‘ಶಾಂತಿ’, ‘ತಾಯಿ’, ‘ಜನಪದ’, ‘ಕರಡಿಪುರ’, ‘ಹಗಲು ವೇಷ’ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದ್ದು ಅವುಗಳಲ್ಲಿ ಹೆಚ್ಚಿನವು ವೈವಿಧ್ಯಮಯ ಪ್ರಶಸ್ತಿಗಳಿಗೆ ಪಾತ್ರವಾಗಿವೆ ಎಂಬುದನ್ನಿಲ್ಲಿ ಸ್ಮರಿಸಬಹುದು.


ಸಂಬಂಧಿತ ಟ್ಯಾಗ್ಗಳು

Baraguru Ramachandrappa Amrutamati Noida Film Festival Haripriya


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ