ಇದು ‘ಚಂದನ’ದ ‘ಗೊಂಬೆ’ ಕಥೆ!

Chandan weds Nivedita Gowda

26-02-2020

ಮೈಸೂರು, ಫೆ.26: ಗಾಯಕ ಚಂದನ್‍ ಶೆಟ್ಟಿ ಹಾಗೂ ನಿವೇದಿತಾ ಗೌಡ ನಡುವಿನ ಪ್ರೇಮಬಂಧನ ‘ದಾಂಪತ್ಯ ಬಂಧನ’ವಾಗಿ ಅಧಿಕೃತತೆಯ ಮೊಹರು ದಕ್ಕಿಸಿಕೊಂಡಿದೆ.

ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಷನ್‍ ಹಾಲ್‍ನಲ್ಲಿ ಇಂದು ಬೆಳಗ್ಗೆ 8.15ರಿಂದ 9ರ ನಡುವಿನ ಮಂಗಲಮುಹೂರ್ತದಲ್ಲಿ ನಿವೇದಿತಾರನ್ನು ಚಂದನ್‍ ಶೆಟ್ಟಿ ಬಾಳಸಂಗಾತಿಯಾಗಿ ಸ್ವೀಕರಿಸಿದ್ದಾರೆ. ಶೆಟ್ಟಿ ಹಾಗೂ ಒಕ್ಕಲಿಗ ಸಂಪ್ರದಾಯದಂತೆ ನಡೆದ ಈ ವಿವಾಹಕ್ಕೆ ಉಭಯ ಕುಟುಂಬಗಳ ಬಂಧು-ಮಿತ್ರರು ಸಾಕ್ಷಿಯಾಗಿ ವಧೂ-ವರರನ್ನು ಹರಸಿದ್ದಾರೆ.

ಬಿಗ್‍ಬಾಸ್‍ ಆವೃತ್ತಿಯೊಂದರಲ್ಲಿ ಪಾಲ್ಗೊಂಡಿದ್ದ ಚಂದನ್‍ ಶೆಟ್ಟಿ ಅದನ್ನು ಗೆದ್ದಾಗ, ಅವರು ಗೆದ್ದಿದ್ದು ಬಿಗ್‍ಬಾಸ್‍ ಸ್ಪರ್ಧೆಯನ್ನು ಮಾತ್ರವೇ ಅಲ್ಲ, ನಿವೇದಿತಾರ ಹೃದಯವನ್ನು ಕೂಡ ಎಂಬುದು ಅರಿವಾಗಿದ್ದು ಕೆಲದಿನಗಳ ನಂತರ. ಬಿಗ್‍ಬಾಸ್‍ನಲ್ಲಿ ಪಾಲ್ಗೊಂಡಿದ್ದ ಅವಧಿಯಲ್ಲೇ ಸಹಸ್ಪರ್ಧಿ ನಿವೇದಿತಾ ಕುರಿತಾಗಿ ‘ಗೊಂಬೆ ಗೊಂಬೆ..’ ಎಂಬ ಗೀತೆಯನ್ನು ಬರೆದಿದ್ದರು ಚಂದನ್‍. ಅಲ್ಲಿಂದ ಶುರುವಾದ ‘ಸ್ನೇಹಬಂಧನ’ ದಿನಗಳೆದಂತೆ ‘ಪ್ರೇಮಬಂಧನ’ವಾಗಿ ಮಾರ್ಪಟ್ಟು, ಮೈಸೂರು ದಸರಾ ಉತ್ಸವದ ಕಾರ್ಯಕ್ರಮವೊಂದರಲ್ಲಿ ಸಾರ್ವಜನಿಕರ ಸಮ್ಮುಖದಲ್ಲೇ ಗೊಂಬೆಗೆ ಚಂದನ್‍ ಪ್ರಪೋಸ್‍ ಮಾಡುವಷ್ಟರ ಮಟ್ಟಿಗೆ ಅದು ಏರುಗತಿ ಕಾಯ್ದುಕೊಂಡಿತ್ತು. ಅದೀಗ ‘ದಾಂಪತ್ಯಗೀತೆ’ಯಾಗಿ ರೂಪಾಂತರಗೊಂಡಿರುವುದು ಇಬ್ಬರ ಅಭಿಮಾನಿಗಳಿಗೂ ಸಂತಸದ ಸಂಗತಿ.

ನವದಂಪತಿಗೆ ‘ಸೂಪರ್‍ ಸುದ್ದಿ’ ವತಿಯಿಂದ ಹೃತ್ಪೂರ್ವಕ ಶುಭಾಶಯಗಳು!


ಸಂಬಂಧಿತ ಟ್ಯಾಗ್ಗಳು

Chandan Shetty Nivedita Gowda Bigg Boss Gombe Gombe


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ