ಹೊಸ್ನಿ ಮುಬಾರಕ್ ಇನ್ನಿಲ್ಲ

Hosni Mubarak no more

25-02-2020

ಕೈರೋ, ಫೆ.25: ಈಜಿಪ್ಟ್‍ ದೇಶದ ಅಧ್ಯಕ್ಷರಾಗಿ 30 ವರ್ಷ ಆಳ್ವಿಕೆ ಮಾಡಿದ್ದ ಹೊಸ್ನಿ ಮುಬಾರಕ್‍ ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು. ಪತ್ನಿ ಸುಜಾನ್‍, ಮಕ್ಕಳಾದ ಗಮಾಲ್‍ ಮತ್ತು ಅಲಾರನ್ನು ಹೊಸ್ನಿ ಮುಬಾರಕ್‍ ಅಗ್ಲಿದ್ದಾರೆ.

1949ರಲ್ಲಿ ಅಲ್ಲಿನ ವಾಯುಸೇನೆಯಲ್ಲಿ ಪೈಲಟ್‍ ಆಗಿ ಕಾರ್ಯನಿರ್ವಹಿಸಿದ್ದ ಹೊಸ್ನಿ, 1972ರಲ್ಲಿ ಈಜಿಪ್ಟ್‍ನ ಪ್ರಧಾನ ದಂಡನಾಯಕನಾಗಿ ಅಧಿಕಾರ ಸ್ವೀಕರಿಸಿದರು. ದೇಶದ ಅಭಿವೃದ್ಧಿಗೆ ಶ್ರಮಿಸಿದ್ದರ ಜತೆಗೆ, ಅಮೆರಿಕ ಜತೆಗಿನ ಮಿತ್ರತ್ವ ಸಾಧನೆ ಹಾಗೂ ಇಸ್ರೇಲ್‍ ಜತೆಗಿನ ಶಾಂತಿ ಸ್ಥಾಪನೆಯಲ್ಲಿ ಅವರು ಮಹತ್ವದ ಕೊಡುಗೆ ನೀಡಿದ್ದರು.


ಸಂಬಂಧಿತ ಟ್ಯಾಗ್ಗಳು

Hosni Mubarak Kairo Egypt ex-president Commander-in-Chief


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ