ಮುಖ್ಯಮಂತ್ರಿಯನ್ನು ಹೊಗಳಿದ ಕಟೀಲ್

Kateel admired CM

25-02-2020

ಬೆಂಗಳೂರು, ಫೆ.25: ನೆರೆ, ಬರ ಇನ್ನಿತರ ಕಾರಣಗಳಿಂದ ತತ್ತರಿಸಿರುವ ರಾಜ್ಯದ ಜನರ ಸಂಕಷ್ಟ ನಿವಾರಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವಿರತ ಶ್ರಮಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷರಾಗಿ ಎನ್‍.ಆರ್‍. ರಮೇಶ್‍ರವರ ಪದಗ್ರಹಣ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, “ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ರೈತರು ಮತ್ತು ಮಹಿಳೆಯರು ಕಣ್ಣೀರು ಸುರಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಜನರು ಕಣ್ಣೀರು ಸುರಿಸಿದರು. ಆದರೆ ಯಡಿಯೂರಪ್ಪ ಮುಖ್ಯಮಂತ್ರಿಗಳಾದ ನಂತರ ಜನರ ಸಂಕಷ್ಟಗಳು ಒಂದೊಂದಾಗಿ ನಿವಾರಣೆಯಾಗುತ್ತಿವೆ” ಎಂದರು.

ಹಿಂದು ಕಾರ್ಯಕರ್ತರ ಹತ್ಯೆ, ದಕ್ಷ ಅಧಿಕಾರಿಗಳ, ರೈತರ ಆತ್ಮಹತ್ಯೆಗಳು ನಡೆದಾಗ ಸಿದ್ದರಾಮಯ್ಯ ಅವರಿಗೆ ಕಣ್ಣೀರು ಬರಲಿಲ್ಲ. ವೀರಶೈವರು ಸೇರಿದಂತೆ ಹಲವು ಸಮಾಜಗಳನ್ನು ಒಡೆದು ಹಾಕಿದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲಬೇಕೆಂದು ಕಟೀಲ್‍ ಇದೇ ವೇಳೆ ದೂರಿದರು.


ಸಂಬಂಧಿತ ಟ್ಯಾಗ್ಗಳು

BJP Yediyurappa Naveen Kumar Kateel N.R. Ramesh


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ