ಸುನಿ-ಗಣೇಶ್ ಜೋಡಿಯಲ್ಲಿ ‘ಸಖತ್’ ಸಿನಿಮಾ

Suni-Ganesh join hands once again

25-02-2020

‘ಸಿಂಪಲ್ಲಾಗ್‍ ಒಂದು ಲವ್‍ ಸ್ಟೋರಿ’ ಅಂದಾಕ್ಷಣ ನೆನಪಾಗೋದು ಆ ಚಿತ್ರವನ್ನು ನಿರ್ದೇಶಿಸಿದ ‘ಸುನಿ’ ಹೆಸರು. ಈ ಚಿತ್ರದ ಮೂಲಕ ಅವರು ಸ್ಯಾಂಡಲ್‍ವುಡ್‍ನಲ್ಲಿ ಜನಪ್ರಿಯರಾದದ್ದನ್ನು ಬಿಡಿಸಿ ಹೇಳಬೇಕಿಲ್ಲ. ಗೋಲ್ಡನ್‍ ಸ್ಟಾರ್‍ ಗಣೇಶ್‍ ಹಾಗೂ ರಶ್ಮಿಕಾ ಮಂದಣ್ಣ ಜೋಡಿಯಿಟ್ಟುಕೊಂಡು ಸುನಿ ನಿರ್ದೇಶಿಸಿದ ‘ಚಮಕ್‍’ ಚಿತ್ರವೂ ಚಿತ್ರರಸಿಕರ ಮನಸೂರೆಗೊಂಡಿತು ಎಂಬುದು ನಿಮಗೆಲ್ಲ ಗೊತ್ತಿರುವಂಥದ್ದೇ.

ಈಗ ಈ ಜೋಡಿ ಮತ್ತದೇ ಮೋಡಿ ಮಾಡಲು ಹೊರಟಿದೆ. ಸುನಿ -ಗಣೇಶ್ ಕಾಂಬಿನೇಷನ್‍ನಲ್ಲಿ ‘ಸಖತ್‍’ ಎಂಬ ಸಿನಿಮಾ ಮೂಡಿಬರಲಿದ್ದು, ಈ ಚಿತ್ರದ ಮುಹೂರ್ತ ಇತ್ತೀಚೆಗಷ್ಟೇ ನೆರವೇರಿದೆ.

ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿರುವ ಈ ಚಿತ್ರ ರೊಮ್ಯಾಂಟಿಕ್‍ ಕಥಾಹಂದರವನ್ನು ಹೊಂದಿದ್ದು, ರಿಯಾಲಿಟಿ ಷೋ ಹಾಗೂ ಕೋರ್ಟ್‍ ಕೇಸ್‍ ಸುತ್ತ ಅದು ಗಿರಕಿ ಹೊಡೆಯುತ್ತದೆ ಎನ್ನಲಾಗಿದೆ.


ಸಂಬಂಧಿತ ಟ್ಯಾಗ್ಗಳು

Ganesh Chamak Suni Sakhat


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ