ಟ್ರಂಪ್‍ ಭೇಟಿ: ಕುಮಾರಣ್ಣ ಟೀಕೆ

Kumara Swamy criticises Trump visit

25-02-2020

ವಿಜಯಪುರ, ಫೆ.25: ಪ್ರಧಾನಿ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೋನಲ್ಡ್‍ ಟ್ರಂಪ್‍ ಪರಸ್ಪರ ಹೊಗಳಿಕೊಳ್ಳುತ್ತ ಭಾಷಣ ಮಾಡುತ್ತಾರೆ; ಹೀಗಾಗಿ ಅವರಿಬ್ಬರಲ್ಲಿ ವ್ಯತ್ಯಾಸವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‍.ಡಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಮಾಧ್ಯಮ ಮಿತ್ರರೊಂದಿಗೆ ಮಾತನಾಡುತ್ತಿದ್ದ ಅವರು, “ಭಾರತಕ್ಕೆ ಅಮೆರಿಕ ಅಧ್ಯಕ್ಷರ ಭೇಟಿ ಹೊಸದೇನಲ್ಲ. ಈವರೆಗೆ ಸಾಕಷ್ಟು ಮಂದಿ ಅಧ್ಯಕ್ಷರು ನಮ್ಮಲ್ಲಿಗೆ ಭೇಟಿಯಿತ್ತಿದ್ದಾರೆ. ಬೇರೆ ಬೇರೆ ದೇಶಗಳ ಮುಖ್ಯಸ್ಥರು ಹೀಗೆ ಪರಸ್ಪರ ಭೇಟಿಯಾಗಿ ಬಾಂಧವ್ಯ ವರ್ಧನೆಗೆ ಆದ್ಯತೆ ನೀಡುವುದರಲ್ಲಿ ತಪ್ಪೇನಿಲ್ಲ. ಆದರೆ ಅಮೆರಿಕದಲ್ಲಿ ಕೆಲವೇ ತಿಂಗಳಲ್ಲಿ ಚುನಾವಣೆ ನಡೆಯಲಿರುವಾಗ ಟ್ರಂಪ್‍ ಭಾರತ ಭೇಟಿ ಅಗತ್ಯವಿತ್ತೇ?" ಎಂದು ಪ್ರಶ್ನಿಸಿದರು.

ಸಮೃದ್ಧ ದೇಶವಾಗಿರುವ ಭಾರತ ವ್ಯಾಪಾರ-ವಹಿವಾಟಿಗೆ ಸೂಕ್ತ ಜಾಗ ಎಂದೇನೋ ಟ್ರಂಪ್‍ ಹೇಳಿದ್ದಾರೆ. ಆದರೆ ಅವರ ಭೇಟಿಯಿಂದ ಭಾರತಕ್ಕೆ ಪ್ರಯೋಜನವಾಗಬೇಕೇ ಹೊರತು, ಲೂಟಿ ಹೊಡೆಯುವುದಕ್ಕೆ ಅವಕಾಶವಾಗಬಾರದು. ಈ ನಿಟ್ಟಿನಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಕುಮಾರಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Trump Modi HD Kumara Swamy America Election


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ