ವಿಶ್ವಸುಂದರಿ ಸ್ಪರ್ಧೆಗೆ ಮಂಗಳೂರು ಚೆಲುವೆ

Castelino selected

24-02-2020

ಮಂಗಳೂರು ಮೂಲದ ಅಡ್ಲೀನ್‍ ಕ್ಯಾಸ್ಟಲಿನೋ ಅವರು ‘ಮಿಸ್‍ ದಿವಾ 2020’ ಸೌಂದರ್ಯ ಸ್ಪರ್ಧೆಯಲ್ಲಿ ಗೆಲ್ಲುವ ಮೂಲಕ, ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಸದವಕಾಶವನ್ನು ದಕ್ಕಿಸಿಕೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಶನಿವಾರ ಸಂಜೆ ನಡೆದ ಸುಂದರ ಕಾರ್ಯಕ್ರಮದಲ್ಲಿ ಪುಣೆಯ ನೋಹಾ ಜೈಸ್ವಾಲ್ ಅವರು ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಅಡ್ಲೀನ್ ಕ್ಯಾಸ್ಟಲಿನೋ ಅವರಿಗೆ ತೀವ್ರ ಸ್ಪರ್ಧೆ ಒಡ್ಡಿದ ಜಬಲ್ಪುರದ ಆವೃತಿ ಚೌಧರಿ ಅವರು ಮಿಸ್ ಮಿಸ್ ಸುಪ್ರಾ ನ್ಯಾಷನಲ್‍ ಪ್ರಶಸ್ತಿಗೆ ಭಾರತದ ಸ್ಪರ್ಧಿಯಾಗಿ ಆಯ್ಕೆಯಾದರು. ಮಿಸ್ ದಿವಾ ಕಳೆದ ವರ್ಷದ ಆವೃತ್ತಿಯ ವಿಜೇತೆ ವರ್ತಿಕಾ ಸಿಂಗ್ ಅವರು ಅಡ್ಲೀನ್‍ ಕ್ಯಾಸ್ಟಲಿನೋ ಅವರಿಗೆ ಕಿರೀಟ ತೊಡಿಸಿ ವಿಜಯಿ ಎಂದು ಘೋಷಿಸಿದರು.

ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಹತ್ತು ಪ್ರಮುಖ ನಗರಗಳಲ್ಲಿ ನಡೆದ ಆಡಿಷನ್‍ನಲ್ಲಿ ಆಯ್ಕೆಯಾಗಿದ್ದ 20 ಫೈನಲಿಸ್ಟ್‍ಗಳ ಪೈಕಿ ಒಬ್ಬರಾಗಿದ್ದ ಕ್ಯಾಸ್ಟಲಿನೋ, ಅವರೆಲ್ಲರನ್ನೂ ಮಣಿಸಿ ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿರುವುದು ಕರ್ನಾಟಕಕ್ಕೆ ಅದರಲ್ಲೂ ನಿರ್ದಿಷ್ಟವಾಗಿ ಮಂಗಳೂರಿಗೆ ಹೆಮ್ಮೆಯ ಸಂಗತಿಯಾಗಿದೆ.


ಸಂಬಂಧಿತ ಟ್ಯಾಗ್ಗಳು

Castelino Mangalore Miss Diva 2020 Miss Universe


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ