ಅಭಿನಂದನ್ ಪಾತ್ರದಲ್ಲಿ ದರ್ಶನ್!

Darshan as Wing Commander Abhinandan

24-02-2020

ಬೆಂಗಳೂರು, ಫೆ.24: ಕಳೆದ ವರ್ಷ ಘಟಿಸಿದ ಪುಲ್ವಾಮಾ ದಾಳಿಯ ಬಳಿಕ ಭಾರತ ನಡೆಸಿದ ವಾಯುದಾಳಿಯ ವೇಳೆ ಪಾಕಿಸ್ತಾನ ಸೇನೆಯ ಕೈವಶವಾಗಿ, ಬಳಿಕ ಭಾರತಕ್ಕೆ ಮರಳಿದ ವೀರಯೋಧ ವಿಂಗ್‍ ಕಮಾಂಡರ್‍ ಅಭಿನಂದನ್‍ ಪಾತ್ರದಲ್ಲಿ ದರ್ಶನ್‍ ನಟಿಸಲಿದ್ದಾರೆ ಎಂಬ ಸುದ್ದಿ ಹೊರಬಂದಿದೆ.

ತಮ್ಮ ನಿರ್ಮಾಣದ ‘ಕುರುಕ್ಷೇತ್ರ’ ಕನ್ನಡ ಚಲನಚಿತ್ರದ ಶತದಿನೋತ್ಸವ ಸಮಾರಂಭದಲ್ಲಿ ಮಾತನಾಡುತ್ತಿದ್ದ ನಿರ್ಮಾಪಕ ಮುನಿರತ್ನ ಅವರು, “ಸಾಮಾಜಿಕ, ಪೌರಾಣಿಕ ಸೇರಿದಂತೆ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿರುವ ದರ್ಶನ್‍ ಅವರನ್ನು ಸೈನಿಕನ ಪಾತ್ರದಲ್ಲಿ ನೋಡಬೇಕೆಂಬ ಆಸೆಯಿದೆ. ಈ ಕುರಿತು ಅವರೊಂದಿಗೂ ಮಾತನಾಡಿದ್ದೇನೆ. ಈ ಚಿತ್ರ ಅಭಿನಂದನ್‍ ಅವರ ಜೀವನವನ್ನು ಆಧರಿಸಿದ್ದೋ ಅಥವ ಆ ಎಳೆಯನ್ನಿಟ್ಟುಕೊಂಡು ಕಥೆ ರೂಪಿಸಿ ನಿರ್ಮಾಣವಾಗುವಂಥದ್ದೋ ಎಂಬುದನ್ನು ಸದ್ಯದಲ್ಲಿಯೇ ತಿಳಿಸುತ್ತೇನೆ. ಆದರೆ ಚಿತ್ರದಲ್ಲಿ ದರ್ಶನ್‍ ಪಾತ್ರದ ಹೆಸರು ‘ವಿಂಗ್‍ ಕಮಾಂಡರ್‍ ಅಭಿನಂದನ್‍’ ಎಂದಿರಲಿದೆ” ಎಂದರು.

ರೆಬೆಲ್ ಸ್ಟಾರ್‍ ಅಂಬರೀಷ್ ಅವರ ಪುತ್ರ ಅಭಿಷೇಕ್‍ ಅವರು ಈ ಚಿತ್ರದ ಮುಖ್ಯಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.


ಸಂಬಂಧಿತ ಟ್ಯಾಗ್ಗಳು

Darshan Wing commander Abhinandan Muniratna Abhishek Ambarish


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ