ಭರ್ಜರಿ ಆಫರ್ ನೀಡಿದ ಬಿಎಸ್ಎನ್ಎಲ್

Super offer by BSNL

24-02-2020

1999 ರೂ. ಮೌಲ್ಯದ ವಾರ್ಷಿಕ ಪ್ರೀಪೇಯ್ಡ್ ಪ್ಲ್ಯಾನ್‍ನ ಕಾಲಾವಧಿಯನ್ನು ಮತ್ತಷ್ಟು ಹೆಚ್ಚಿಸುವ ಮೂಲಕ, ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್‍ ಸಂಸ್ಥೆ ತನ್ನ ಗ್ರಾಹಕರಿಗೆ ಖುಷಿ ನೀಡಿರುವುದರ ಜತೆಗೆ ಖಾಸಗಿ ಟೆಲಿಕಾಂ ಕಂಪನಿಗಳಿಗೂ ತೊಡೆ ತಟ್ಟಿದೆ.

ಈ ಪರಿಷ್ಕೃತ ಸ್ವರೂಪದ ಅನುಸಾರ, ವಾರ್ಷಿಕ ಪ್ಲ್ಯಾನ್‍ ರೀಚಾರ್ಜ್‍ ಮಾಡಿಸಿಕೊಳ್ಳುವ ಬಿಎಸ್‍ಎನ್‍ಎಲ್‍ ಗ್ರಾಹಕರಿಗೆ ವಾಡಿಕೆಯ ವ್ಯಾಲಿಡಿಟಿ ಜತೆಗೆ ಹೆಚ್ಚುವರಿಯಾಗಿ 71 ದಿನಗಳು ಸೇರಿಕೊಂಡು ಒಟ್ಟು 436 ದಿನಗಳ ವ್ಯಾಲಿಡಿಟಿ ದೊರೆಯಲಿದೆ.

ಭಾರತದ ಯಾವುದೇ ನೆಟ್‍ವರ್ಕ್‍ಗೆ ಅನಿಯಮಿತ ಧ್ವನಿ ಕರೆಗಳು, ಪ್ರತಿದಿನ 3 ಜಿಬಿ ಡೇಟಾ ಸೌಲಭ್ಯ, ಪ್ರತಿದಿನ ಉಚಿತವಾಗಿ 100 ಎಸ್‍ಎಂಎಸ್‍, ಬಿಎಸ್‍ಎನ್‍ಎಲ್‍ ಟ್ಯೂನ್ಸ್‍ ಮತ್ತು ಟಿವಿ ಚಂದಾದಾರಿಕೆ ಕೂಡ ಗ್ರಾಹಕರಿಗೆ ದೊರೆಯಲಿದೆ ಎಂಬುದು ಗಮನಾರ್ಹ ಸಂಗತಿ.


ಸಂಬಂಧಿತ ಟ್ಯಾಗ್ಗಳು

BSNL additinal 71 days 1999 Rs offer BSNL challenges private telecom companies


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ