ಬೆಂಗಳೂರಿಗೆ ಬಂದ ಭೂಗತ ಪಾತಕಿ

Ravi Pujari arrested

24-02-2020

ಬೆಂಗಳೂರು, ಫೆ.24:  ಇಡೀ ದೇಶವೇ ಬೆಚ್ಚಿಬಿದ್ದ 1993ರ ಮುಂಬೈ ಸರಣಿ ಬಾಂಬ್‍ ಸ್ಫೋಟದ ಮಾಸ್ಟರ್‍ ಮೈಂಡ್‍ ರವಿ ಪೂಜಾರಿಯನ್ನು ಬಿಗಿಭದ್ರತೆಯಲ್ಲಿ ಬೆಂಗಳೂರಿಗೆ ಕರೆತರಲಾಗಿದೆ. ಸಿಸಿಬಿ ಇನ್ಸ್‍ಪೆಕ್ಟರ್‍ ಮಹೇಶ್‍, ಕಾನೂನು-ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಮರ್‍ ಕುಮಾರ್‍ ಪಾಂಡೆ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ ಎಂದು ತಿಳಿದುಬಂದಿದೆ.

ಮಡಿವಾಳದ ಪೊಲೀಸ್‍ ಕಚೇರಿಯಲ್ಲಿ ಕೂಲಂಕಷ ವಿಚಾರಣೆಗೆ ಒಳಪಡಿಸಿದ ನಂತರ ರವಿ ಪೂಜಾರಿಯನ್ನು ಕೋರ್ಟ್‍ ಮುಂದೆ ಹಾಜರುಪಡಿಸಲಾಗುತ್ತದೆ ಎನ್ನಲಾಗಿದೆ.

ಮಲ್ಪೆ ಮೂಲದ ಈ ಪಾತಕಿ, ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ದುಷ್ಕೃತ್ಯಗಳನ್ನು ಎಸಗಿದ ಆರೋಪ ಹೊತ್ತು ನಾಪತ್ತೆಯಾಗಿದ್ದ. ಪಶ್ಚಿಮ ಆಫ್ರಿಕಾದ ಬುರ್ಕಿನಾ ಫಾಸೊ ಎಂಬ ಪ್ರದೇಶದ ನಾಗರಿಕ ಎಂಬಂತೆ ಬಿಂಬಿಸಿಕೊಂಡು, ಆಂಥೋಣಿ ಫರ್ನಾಂಡಿಸ್‍ ಎಂಬುದಾಗಿ ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದ.

ಆತನ ಹಸ್ತಾಂತರಕ್ಕೆ ಸಂಬಂಧಿಸಿದ ಕಾನೂನು ತೊಡಕಿನ ನಿವಾರಣೆಯಾದ ಪರಿಣಾಮ, ಕೆಲ ದಿನಗಳ ಹಿಂದಷ್ಟೇ ಬಂಧನಕ್ಕೆ ಒಳಗಾದ ಪೂಜಾರಿಯನ್ನು ಕರ್ನಾಟಕ ಪೊಲೀಸರು ಸೆನೆಗಲ್‍ನಲ್ಲಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದರು ಎಂಬುದನ್ನಿಲ್ಲಿ ಸ್ಮರಿಸಬಹುದು.

ರವಿ ಪೂಜಾರಿ ವಿರುದ್ಧ ಕರ್ನಾಟಕದಲ್ಲಿ 49 ಪ್ರಕರಣಗಳು ದಾಖಲಾಗಿದ್ದು, ಇಲ್ಲಿಯವರೆಗೆ 13 ರೆಡ್‍ ಕಾರ್ನರ್‍ ನೋಟಿಸ್‍ಗಳು ಜಾರಿಯಾಗಿವೆ.


ಸಂಬಂಧಿತ ಟ್ಯಾಗ್ಗಳು

Ravi Pujari Burkina Phaso Red corner Senegal


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ