ಮುಖ್ಯಸ್ಥನ ಸ್ಥಾನಕ್ಕೆ ಬಿ.ಆರ್. ಶೆಟ್ಟಿ ರಾಜೀನಾಮೆ

BR Shetty resigns

22-02-2020

ಬೆಂಗಳೂರು, ಫೆ.21: ದಕ್ಷಿಣ ಕನ್ನಡ ಜಿಲ್ಲೆ ಮೂಲದವರಾಗಿದ್ದು ಅಬುದಾಭಿಯಲ್ಲಿ ‘ಎಂಎನ್‍ಸಿ ಹೆಲ್ತ್' ಎಂಬ ಕಂಪನಿಯನ್ನು ಹುಟ್ಟುಹಾಕಿದ್ದ ಬಿ.ಆರ್‍. ಶೆಟ್ಟಿ, ಅದರ ಮುಖ್ಯಸ್ಥನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಫೆಬ್ರವರಿ 2ನೇ ವಾರದಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಸದಸ್ಯರು ರಾಜೀನಾಮೆ ಸಲ್ಲಿಕೆಗೆ ಶೆಟ್ಟಿಯವರನ್ನು ಒತ್ತಾಯಿಸಿದ್ದರು ಎನ್ನಲಾಗಿದೆ.

ತಾವು ಕಟ್ಟಿದ ಉದ್ಯಮ ಸಾಮ್ರಾಜ್ಯದ ಕಾರ್ಯಕ್ಷಮತೆ ಸೊರಗತೊಡಗಿ ಮಾರುಕಟ್ಟೆಯಲ್ಲಿ ಕಂಪನಿಯ ಷೇರುಮೌಲ್ಯ ಗಮನಾರ್ಹವಾಗಿ ಕುಸಿದ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಸರಿಸುಮಾರು 11,460 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವ ಎಂಎನ್‍ಸಿ ಹೆಲ್ತ್ ಕಂಪನಿಯ ಷೇರು ವಹಿವಾಟು ಕಳೆದ ಡಿಸೆಂಬರ್‍ನಿಂದೀಚೆಗೆ ಶೇ. 70ರಷ್ಟು ಕುಸಿತವನ್ನು ದಾಖಲಿಸಿತ್ತು.

ಇದಕ್ಕೂ ಮೂರು ವರ್ಷಗಳ ಹಿಂದೆ ಕಂಪನಿಯ ಆರ್ಥಿಕ ನಿರ್ವಹಣೆಯಲ್ಲಿ ಗಣನೀಯ ಹಿನ್ನಡೆಯಾಗಿರುವುದು ಮಾರುಕಟ್ಟೆಯ ಅರಿವಿಗೆ ಬಂದಿತ್ತು ಎನ್ನಲಾಗಿದೆ.


ಸಂಬಂಧಿತ ಟ್ಯಾಗ್ಗಳು

BR Shetty Resignation MNC Health Abhudabhi


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ