ಕೆಪಿಸಿಸಿ ಗಾದಿ: ಡಿಕೆಶಿ ಹಿಂಬಾಲಕರ ಅಸಮಾಧಾನ

DK Shivakumar unable to get KPCC Chief position

20-02-2020

ಬೆಂಗಳೂರು, ಫೆ.20: ಡಿ.ಕೆ. ಶಿವಕುಮಾರ್‍ ಅವರಿಗೆ ಕೆಪಿಸಿಸಿ ಅಧ್ಯಕ್ಷಗಿರಿ ದಕ್ಕದಿರುವುದು ಅವರ ಹಿಂಬಾಲಕರಲ್ಲಿ ಅಸಮಾಧಾನವನ್ನು ಉಂಟುಮಾಡಿದೆ.

ಅಧ್ಯಕ್ಷರಾಗುವ ಎಲ್ಲ ಅರ್ಹತೆ, ಸಾಮರ್ಥ್ಯ ಹಾಗೂ ಸಂಘಟನಾ ಶಕ್ತಿ ಡಿಕೆಶಿ ಅವರಲ್ಲಿದ್ದರೂ, ಸಂಬಂಧಪಟ್ಟವರು ಅದನ್ನು ಗಮನಕ್ಕೆ ತಂದುಕೊಳ್ಳದಿರುವುದು ಬೆಂಬಲಿಗರ ಅಸಹನೆಗೆ ಕಾರಣವಾಗಿದೆ. ಡಿಕೆಶಿ ಅವರು ಸ್ವತಃ ಈ ನಿಟ್ಟಿನಲ್ಲಿ ಮುನ್ನುಗ್ಗಬೇಕಿತ್ತು, ತಮ್ಮ ಪ್ರಭಾವ-ಪ್ರಾಬಲ್ಯವನ್ನು ಹೈಕಮಾಂಡ್‍ ಮುಂದೆ ಸಾಬೀತು ಮಾಡಬೇಕಿತ್ತು ಎಂಬುದು ಬೆಂಬಲಿಗರ ಮನದಾಳದ ಮಾತು.

ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕಾದ ಹೀನಾಯ ಸೋಲಿನ ನೈತಿಕ ಹೊಣೆಹೊತ್ತು ದಿನೇಶ್ ಗುಂಡೂರಾವ್‍ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಈಗಾಗಲೇ ಸರಿಸುಮಾರು 2 ತಿಂಗಳಾಗಿವೆ. ಡಿಕೆಶಿ ನೇಮಕಕ್ಕೆ ಹೈಕಮಾಂಡ್‍ಗೆ ಒಲವಿದೆ ಎನ್ನಲಾಗಿದ್ದರೂ, ಸಿದ್ದರಾಮಯ್ಯ ಬಣ ವ್ಯಕ್ತಪಡಿಸುತ್ತಿರುವ ವಿರೋಧದಿಂದಾಗಿ ಅದು ಮೀನ-ಮೇಷ ಎಣಿಸುವಂಥ ಪರಿಸ್ಥಿತಿ ನಿರ್ಮಾಣವಾಗಿರುವುದು ಬಹಿರಂಗ ಗುಟ್ಟು.


ಸಂಬಂಧಿತ ಟ್ಯಾಗ್ಗಳು

DK Shivakumar Congress KPCC Siddaramaiah


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ