ಶಾರೀರಿಕ ಸದೃಢತೆ ಕಾಯ್ದುಕೊಳ್ಳಲು ಕರೆ

Maintain Physical fitness

19-02-2020

ಬೆಂಗಳೂರು, ಫೆ 19: ಯುವಕರು ದುರಭ್ಯಾಸಗಳಿಂದ ದೂರ ಉಳಿದು ಉತ್ತಮ ಆಹಾರ ಪದ್ದತಿ ರೂಢಿಸಿಕೊಂಡು ಶಾರೀರಿಕ ಸದೃಢತೆ ಕಾಯ್ದುಕೊಂಡಾಗ ಮಾತ್ರ ಜೀವನದಲ್ಲಿ ಉತ್ತಮ ಸಾಧನೆ ತೋರುವುದು ಸಾಧ್ಯ ಎಂದು ರಾಜ್ಯಪಾಲ ವಜುಭಾಯಿ ವಾಲಾ ಅವರು ತಿಳಿಸಿದರು.

ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಈಶಾನ್ಯ ರಾಜ್ಯಗಳ ಯುವ ವಿನಿಮಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ ಯುವಕರು ನಿರ್ದಿಷ್ಟ ಗುರಿ ಸಾಧನೆಗಾಗಿ ಏನನ್ನಾದರೂ ತ್ಯಾಗ ಮಾಡಲು ಸಿದ್ಧವಿರಬೇಕು ಎಂದರು.

ಮನ್ಯಷ್ಯನಿಗೆ ಹಣ, ಆಸ್ತಿ ನಿಜವಾದ ಸಂಪತ್ತಲ್ಲ, ಜ್ಞಾನವೇ ನಿಜವಾದ ಸಂಪತ್ತು. ಜ್ಞಾನಾಭಿವೃದ್ಧಿಗಾಗಿ ಹೆಚ್ಚು ಹೆಚ್ಚು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ದೇಶದ ಯುವಕರು ಶಾರೀರಿಕ ಸದೃಢತೆ, ದೈಹಿಕ ಸಾಮರ್ಥ್ಯ ಕಾಯ್ದು ಕೊಳ್ಳುವುದರೊಂದಿಗೆ ಗುರಿ ಇದ್ದರೆ ಹಿಮಾಲಯವನ್ನು ಏರುವುದು ಸುಲಭ ಎಂದರು.

ಯುವಕರು ಜೀವನದಲ್ಲಿ ಯಾವುದಾದರೂ ಒಂದು ವಿಷಯದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಬೇಕು. ಗಾಂಧೀಜಿಯವರು ಲಂಡನ್‌ನಲ್ಲಿ ಬ್ಯಾರಿಸ್ಟರ್ ಪದವಿ ಪಡೆದ ನಂತರ ದೇಶವನ್ನು ಬ್ರಿಟಿಷರಿಂದ ಮುಕ್ತಗೊಳಿಸಬೇಕೆನ್ನುವ ಗುರಿ ಇಟ್ಟುಕೊಂಡಿದ್ದರ ಪರಿಣಾಮವೇ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ್ದು ಎಂದು ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

Scouts Youth Vajubhai Wala Governor


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ