ಇನ್ಫೋಸಿಸ್ ಫೌಂಡೇಷನ್ ವತಿಯಿಂದ ಪ್ರಶಸ್ತಿ ಪ್ರದಾನ

Infosys foundation awardees

19-02-2020

ಬೆಂಗಳೂರು, ಫೆ. 19: ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಪೂರಕವಾದ ಪರಿಹಾರಗಳನ್ನು ಅವಿಷ್ಕರಿಸಿರುವ ೧೩ ಮಂದಿಗೆ ಸುಮಾರು ಒಂದೂವರೆ ಕೋಟಿ ರೂ.ಗಳನ್ನೊಳಗೊಂಡ ಇನ್ಫೋಸಿಸ್ ಫೌಂಡೇಷನ್‌ನ ಆರೋಹಣ್ ಪ್ರಶಸ್ತಿಯನ್ನು ಬುಧವಾರ ಪ್ರದಾನ ಮಾಡಲಾಯಿತು.

ಪ್ರಶಸ್ತಿ ವಿಜೇತರ ಪೈಕಿ ಕೋಲ್ಕತಾದ ಪಾರ್ಥ ಪ್ರತಿಮ್ ದಾಸ್ ಮಹಾಪಾತ್ರ ಇವರು ಹಿಮೊಗ್ಲೋಬಿನ್ ಮಟ್ಟವನ್ನು ಮಾನವ ದೇಹದಿಂದ ರಕ್ತವನ್ನು ತೆರೆಯದೇ ಮಾಪನ ಮಾಡುವ ನಾನ್-ಇನ್ ವೇಸಿವ್, ನಾನ್ ಕಾಂಟ್ಯಾಕ್ಟ್, ರೋಬಸ್ಟ್ ಹ್ಯಾಂಡ್ ಹೆಲ್ಡ್ ಪೋರ್ಟೇಬಲ್ ಡಿವೈಸ್ ಅನ್ನು ಅಭಿವೃದ್ಧಿ ಪಡಿಸಿದ್ದಾರೆ. ಬೆಂಗಳೂರಿನ ಡಾ. ಬಿನಿತಾ ಎಸ್. ತುಂಗಾ ಹಾಗೂ ಡಾ. ರಾಶಬೆಹರಿ ತುಂಗಾ ಅವರು ಸೊಳ್ಳೆ ಕಡಿತದಿಂದ ಬರುವ ಮಲೇರಿಯಾ, ಚಿಕನ್ ಗುನ್ಯಾ, ಡೆಂಗ್ಯೂವನ್ನು ಪರಿಣಾಮಕಾರಿಯಾಗಿ ತಪ್ಪಿಸುವ ಹಾಗೂ ಆರಂಭಿಕ ಹಂತದಲ್ಲಿ ಹರಡುವುದನ್ನು ನಿಯಂತ್ರಿಸುವ ಸಿಂಗಲ್ ಡಿವೈಸ್ ಅನ್ನು ಅಭಿವೃದ್ಧಿ ಪಡಿಸಿದ್ದಾರೆ.

ಮಿಕ್ಕಂತೆ ಪ್ರಶಸ್ತಿ ಪುರಸ್ಕೃತರಲ್ಲಿ ಮುಂಬೈನ ತುಮಾಸ್, ಕೇರಳದ ರಶೀದ್ ಕೆ.ವಿಮಲ್, ಗೋವಿಂದ್ ಹಾಗೂ ನಿಖಿಲ್, ಚೆನ್ನೈನ ರಾಮಲಿಂಗಂ, ಬೆಂಗಳೂರಿನ ನಿತೀಶ್ ಕುಮಾರ್, ರಾಜಲಕ್ಷ್ಮೀ ಬೋರ್ಥಕೂರು, ಡಾ.ವಿಶಾಲ್ ರಾವ್, ಶಶಾಂಕ ಮಹೇಶ್, ನವದೆಹಲಿಯ ಅನೀಶ್ ಶರ್ಮಾ ಸೇರಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Infosys Arohan Award Sudha Murthy Parth Pratim Das


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ