ಸಂಪುಟದಿಂದ ಅದಕ್ಷರನ್ನು ಕೈಬಿಡಲು ಆಗ್ರಹ

Remove Inefficient ministers

18-02-2020

ಬೆಂಗಳೂರು, ಫೆ,೧೮: ರಾಜ್ಯ ಬಿಜೆಪಿಯಲ್ಲಿ ಮಂತ್ರಿ ಪದವಿ ಆಕಾಂಕ್ಷಿಗಳ ಅಸಮಾಧಾನ ಜ್ವಾಲಾಮುಖಿಯ ರೂಪ ಪಡೆಯುತ್ತಿದ್ದು ಮಾರ್ಚ್ ಅಂತ್ಯದ ವೇಳೆಗೆ ‘ಕ್ವಿಟ್ ಯೂಸ್‌ಲೆಸ್ ಮಿನಿಸ್ಟರ್ಸ್‍’ ಹೋರಾಟಕ್ಕೆ ಚಾಲನೆ ನೀಡಲು ನಿರ್ಧರಿಸಿದ್ದಾರೆ.

ಬಜೆಟ್ ಅಧಿವೇಶನಕ್ಕೆ ಯಾವುದೇ ರೀತಿ ತೊಂದರೆಯಾಗಬಾರದು ಎಂಬ ಕಾರಣಕ್ಕಾಗಿ ಮಾರ್ಚ್ ಅಂತ್ಯದವರೆಗೆ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸದಿರಲು ಅತೃಪ್ತರು ತೀರ್ಮಾನಿಸಿದ್ದು ಅಧಿವೇಶನ ಮುಗಿದ ಕೂಡಲೇ ಅದಕ್ಕೆ ಚಾಲನೆ ನೀಡಲು ತೀರ್ಮಾನಿಸಿದ್ದಾರೆ.

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಶಶಿಕಲಾ ಜೊಲ್ಲೆ, ಬಸವರಾಜ ಬೊಮ್ಮಾಯಿ ಸೇರಿದಂತೆ ಕನಿಷ್ಟ ಅರ್ಧ ಡಜನ್ ಮಂತ್ರಿಗಳನ್ನು ಸಂಪುಟದಿಂದ ಕೈಬಿಡಬೇಕು. ದಕ್ಷರನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಅತೃಪ್ತರು ಕೂಗೆಬ್ಬಿಸಿದ್ದಾರೆ. ವಿಧಾನಮಂಡಲ ಅಧಿವೇಶನ ಆರಂಭವಾಗಿರುವ ಹಿನ್ನೆಲೆಯಲ್ಲಿ ವಿಧಾನಸಭೆಯ ಮೊಗಸಾಲೆಯಲ್ಲಿ ಪ್ರತ್ಯೇಕವಾಗಿ ಚರ್ಚೆ ಆರಂಭಿಸಿರುವ ಶಾಸಕರು ತಮ್ಮ ತಮ್ಮ ಅಸಮಾಧಾನವನ್ನು ಪರಸ್ಪರ ಹಂಚಿಕೊಳ್ಳತೊಡಗಿದ್ದಾರೆ ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರ್ಕಾರ ಸನ್ನಿವೇಶದ ಕೂಸಾಗಿರಬಹುದು. ಹೊರಗಿನಿಂದ ಬಂದವರಿಗೆ ಮಂತ್ರಿ ಸ್ಥಾನ ನೀಡುವ ಅನಿವಾರ್ಯತೆಗೂ ಒಳಗಾಗಿರಬಹುದು. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಂದ ವಲಸೆ ಬಂದವರಿಗೆ ಮಂತ್ರಿಗಿರಿ ನೀಡಿರುವುದು ಸರಿ ಮತ್ತು ಅದು ಅನಿವಾರ್ಯ ಕೂಡಾ. ಯಾಕೆಂದರೆ ಅವರಿಲ್ಲದೆ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿರಲಿಲ್ಲ. ಆದರೆ ಪಕ್ಷದ ವತಿಯಿಂದ ಮಂತ್ರಿಗಳಾಗಿರುವವರ ಪೈಕಿ ಕನಿಷ್ಠ ಅರ್ಧ ಡಜನ್ ಮಂದಿಯನ್ನು ಮಂತ್ರಿಮಂಡಲದಿAದ ಕಿತ್ತುಹಾಕಬೇಕು. ಅದೇ ರೀತಿ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಕರಾವಳಿ ಕರ್ನಾಟಕ ಭಾಗಗಳಿಂದ ದಕ್ಷರು, ಸಮರ್ಥರನ್ನು ಮಂತ್ರಿಮಂಡಲಕ್ಕೆ ನೇಮಕ ಮಾಡಬೇಕು ಎಂಬುದು ಈ ಅತೃಪ್ತರ ಬೇಡಿಕೆಯಾಗಿದೆ ಎನ್ನಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ