ಕಣ್ಮರೆಯಾದ ಕಿಶೋರಿ ಬಲ್ಲಾಳ್

Kishori Ballal no more

18-02-2020

ಬೆಂಗಳೂರು, ಫೆ.೧೮: ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟಿ ಕಿಶೋರಿ ಬಲ್ಲಾಳ್ ಅವರು ಇಂದು ವಿಧಿವಶರಾದರು. ಕಳೆದ ಕೆಲವು ದಿನಗಳಿಂದ ಉಸಿರಾಟ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಸೇವಾಕ್ಷೇತ್ರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಮೂಲತಃ ರಂಗಭೂಮಿ ಕಲಾವಿದೆಯಾಗಿದ್ದ ಕಿಶೋರಿ ಬಲ್ಲಾಳ್, ೧೯೬೦ರಲ್ಲಿ ‘ಇವಳೆಂಥಾ ಹೆಂಡ್ತಿ’ ಎಂಬ ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣ ಮಾಡಿ ೭೨ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡರು. ಕನ್ನಡದ ‘ಜೋಡಿಹಕ್ಕಿ, ‘ವೀರಬಾಹು, ‘ಸೂರ್ಯಕಾಂತಿ, ‘ಅಕ್ಕ ತಂಗಿ, ‘ಹನಿ ಹನಿ, ‘ಶಿವಗಾಮಿ, ‘ಕಹಿ, ‘ನಾನಿ’ಚಿತ್ರಗಳು ಮಾತ್ರವಲ್ಲದೆ ಆಶುತೋಷ್ ಗೋವಾರಿಕರ್ ನಿರ್ದೇಶನದ ‘ಸ್ವದೇಶ್’ ಹಿಂದಿ ಚಿತ್ರದಲ್ಲಿ ಶಾರುಖ್ ಖಾನ್ ತಾಯಿಯ ಪಾತ್ರದಲ್ಲಿ ನಟಿಸಿ ಭಾರಿ ಜನಮೆಚ್ಚುಗೆ ಪಡೆದಿದ್ದರು. ಕೆಲವೊಂದು ಪ್ರಸಿದ್ಧ ಜಾಹೀರಾತುಗಳಲ್ಲೂ ಕಿಶೋರಿ ಬಲ್ಲಾಳ್ ಕಾಣಿಸಿಕೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Kishori Ballal Jodihakki Swadesh Ivalentha Hendti


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ