ಅಸಭ್ಯ ವರ್ತನೆ: ಕಂಡಕ್ಟರ್ಗೆ ಧರ್ಮದೇಟು

Conductor arrested

17-02-2020

ಬೆಂಗಳೂರು, ಫೆ.17: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿದ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್‌ಗೆ ಆಕೆಯ ಪ್ರಿಯಕರ ಹಾಗೂ ಸ್ನೇಹಿತರು ಥಳಿಸಿ ಸುಬ್ರಮಣ್ಯನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ಕಂಡಕ್ಟರ್ ಇಸುಬ್‌ ಅಲಿ ಪುತ್ತೂರು ಡಿಪೋದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಧರ್ಮಸ್ಥಳ ಡಿಪೋದಲ್ಲಿದ್ದಾಗಲೂ ಇಂತಹುದೇ ಕೃತ್ಯ ನಡೆಸಿ ಸೇವೆಯಿಂದ ಅಮಾನತ್ತಾಗಿದ್ದುದು ತಿಳಿದುಬಂದಿದೆದ.

ಪುತ್ತೂರಿಗೆ ಹೋಗಲು ಯುವತಿಯು ಕಳೆದ 3 ದಿನಗಳ ಹಿಂದೆ ಯಶವಂತಪುರದಿಂದ ಬಸ್ ಹತ್ತಿದ್ದರು. ಟಿಕೆಟ್ ನೀಡುವ ನೆಪದಲ್ಲಿ ಆರೋಪಿ ಕಂಡಕ್ಟರ್ ಪಕ್ಕದಲ್ಲಿ ಬಂದು ಕುಳಿತು ನಂತರ ಅಸಭ್ಯವಾಗಿ ವರ್ತಿಸಿದ ಎನ್ನಲಾಗಿದೆ. ಯುವತಿ ಪ್ರತಿರೋಧ ತೋರಿದರೂ ಆತ ತನ್ನ ಚಾಳಿ ಮುಂದುವರಿಸಿದ್ದರಿಂದ ಬೇಸತ್ತ ಮಹಿಳೆ ಆತನಿಗೆ ಗೊತ್ತಾಗದಂತೆ ಮೊಬೈಲಿನಲ್ಲಿ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ.

ಕಂಡಕ್ಟರ್ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಕ್ರೋಶ ವ್ಯಕ್ತವಾಗಿತ್ತು ವಿಡಿಯೋ ನೋಡಿದ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ತನಿಖೆಗೆ ಆದೇಶಿಸಿದಾಗ, ಆತ ಪುತ್ತೂರು ಡಿಪೋದಲ್ಲಿ ಕೆಲಸ ಮಾಡುತ್ತಿರುವುದು ಪತ್ತೆಯಾಗಿದೆ.

ಆತನ ಅಸಭ್ಯ ವರ್ತನೆ ಬಗ್ಗೆ ಯುವತಿಯು ತನ್ನ ಪ್ರಿಯಕರನಿಗೂ ತಿಳಿಸಿದ್ದರು. ಅದೇ ಬಸ್ ಭಾನುವಾರ ರಾತ್ರಿ ನಗರಕ್ಕೆ ಬಂದಾಗ ಕಾದು ಕುಳಿತಿದ್ದ ಪ್ರಿಯಕರ ಹಾಗೂ ಆತನ ಸ್ನೇಹಿತರು ಇಸುಬ್ ಅಲಿಯನ್ನು ಹಿಡಿದು ಧರ್ಮದೇಟು ಕೊಟ್ಟು ಸುಬ್ರಮಣ್ಯನಗರ ಪೊಲೀಸರಿಗೆ ಒಪ್ಪಿಸಿದರು ಎಂದು ತಿಳಿದುಬಂದಿದೆ.


ಸಂಬಂಧಿತ ಟ್ಯಾಗ್ಗಳು

Conductor arrested Subrahmanya nagar police Sexual Harassment Puttur Depot


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ