ಗುಣಮಟ್ಟ ನಿರ್ವಹಣೆಗೆಂದು ಕಾಯ್ದೆಗೆ ತಿದ್ದುಪಡಿ

Quality control of medicines

17-02-2020

ಬೆಂಗಳೂರು, ಫೆ.೧೫: ಔಷಧಗಳ ಗುಣಮಟ್ಟ ನಿರ್ವಹಣೆಗಾಗಿ ಹಾಗೂ ಕಲಬೆರಕೆ ನಿಯಂತ್ರಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಡ್ರಗ್ ಮತ್ತು ಕಾಸ್ಮೆಟಿಕ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ.

ಇದುವರೆಗೂ, ಔಷಧಗಳ ಗುಣಮಟ್ಟ ನಿರ್ವಹಣೆ ಸಂಬಂ‍ಧಿತ ಹೊಣೆಗಾರಿಕೆ ಉತ್ಪಾದನಾ ಕಂಪನಿಗಳದ್ದಾಗಿತ್ತು. ಆದರೀಗ ಔಷಧಗಳು ಕಳಪೆ ಗುಣಮಟ್ಟದ್ದು ಎಂದು ಕಂಡುಬಂದರೆ ಔಷಧ ಮಾರಾಟ ಕಂಪನಿಗಳನ್ನೂ ಹೊಣೆಗಾರರನ್ನಾಗಿಸಲು ಹಾಗೂ ಔಷಧ ಕಲಬೆರಕೆ ಕಂಡುಬಂದಲ್ಲಿ ಸಂಬಂಧಪಟ್ಟ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಲು ಸದರಿ ತಿದ್ದುಪಡಿ ಅನುವುಮಾಡಿಕೊಡಲಿದೆ. ಈ ನಿಯಮ ಮುಂಬರುವ ಮಾರ್ಚ್‍ ತಿಂಗಳಿಂದ ಜಾರಿಗೆ ಬರಲಿದೆ.

ಔಷಧ ತಯಾರಿಕೆಯನ್ನು ಸಣ್ಣ ಕಂಪನಿಗಳಿಗೆ ಹೊರಗುತ್ತಿಗೆ ನೀಡಿ, ಹೀಗೆ ತಯಾರಾದ ಉತ್ಪನ್ನಗಳನ್ನು ತಮ್ಮ ಹಣೆಪಟ್ಟಿಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದ ದೊಡ್ಡ ದೊಡ್ಡ ಔಷಧ ಕಂಪನಿಗಳು ಇನ್ನು ಮುಂದೆ ಔಷಧ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ.


ಸಂಬಂಧಿತ ಟ್ಯಾಗ್ಗಳು

Quality Medicine Pharmaceauticals Amendment act


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ