ಭಾರಿ ವಂಚನೆ: ಸೈಬರ್ ಕ್ರೈಂ ಪೊಲೀಸರಿಗೆ ದೂರು

Old couple got cheated

17-02-2020

ಬೆಂಗಳೂರು,ಫೆ.೧೫: ೯೩ ಕೋಟಿ ಹಣದ ಆಸೆಗೆ ಬಿದ್ದು ೧ ಕೋಟಿ ೬೭ ಲಕ್ಷಗಳ ವಂಚನೆಗೊಳಾಗಿರುವ ದಂಪತಿ ಕಂಗಲಾಗಿ ಸೈಬರ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

ಜೆಪಿ ನಗರದ ಅಂಬುಲಕ್ಷ್ಮಿ ಮತ್ತು ಶ್ರೀನಿವಾಸ್ ದಂಪತಿ ವರ್ಷಗಟ್ಟಳೆ ಕೂಡಿಟ್ಟಿದ್ದ ಹಣ ಕಳೆದುಕೊಂಡಿದ್ದು, ಅವರು ನೀಡಿರುವ ದೂರನ್ನು ಗಂಭೀರವಾಗಿ ಪರಿಗಣಿಸಿ ದುಷ್ಕರ್ಮಿಗಳ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ.
ಕಳೆದ ನವಂಬರ್ ೨೦ರಂದು ಅಂಬುಲಕ್ಷ್ಮೀ ಮೊಬೈಲ್ ನಂಬರ್‌ಗೆ ಕರೆ ಮಾಡಿದ್ದ ದುಷ್ಕರ್ಮಿ ನಾನು ಸ್ಯಾಮ್‌ಸಾಂಗ್ ಕಂಪನಿ ಏಜೆಂಟ್ ಎಂದು ಪರಿಚಯಿಸಿಕೊಂಡು ಸ್ಯಾಮ್ ಸಾಂಗ್ ಕಂಪನಿಯ ಈ ವರ್ಷದ ಲಾಟರಿಯಲ್ಲಿ ನಿಮ್ಮ ನಂಬರ್ ಆಯ್ಕೆಯಾಗಿದ್ದು, ೧೦ ಲಕ್ಷ ಪೌಂಡ್ ಹಣ ಅಂದರೆ ೯೩ ಕೋಟಿ ಹಣ ನಿಮಗೆ ಬಂದಿದೆ ಎಂದಿದ್ದ.

ದುಷ್ಕರ್ಮಿಯ ನಯವಾದ ಮಾತು ನಂಬಿದ ದಂಪತಿ ಕೋಟಿ ಕೋಟಿ ಆಸೆಗೆ ಬಿದ್ದು, ಅವರು ಕೇಳಿದ ಎಲ್ಲಾ ದಾಖಲೆಗಳನ್ನು ನೀಡಿದ್ದಾರೆ. ನಂತರ ೯೩ ಕೋಟಿ ಹಣಕ್ಕೆ ಮೊದಲು ತೆರಿಗೆ ಕಟ್ಟಬೇಕು. ಹಾಗಾಗಿ ನೀವು ೧ ಕೋಟಿ ೬೭ ಲಕ್ಷ ಹಣ ಅಕೌಂಟ್‌ಗೆ ಹಾಕಿ ಎಂದು ಹಾಕಿಸಿಕೊಂಡಿದ್ದಾರೆ.

ಹಣ ಹಾಕಿದ ನಂತರ ದಂಪತಿ ಅವರಿಗೆ ಫೋನ್ ಮಾಡಿದಾಗ ನಂಬರ್ ನಾಟ್ ರಿಚಬಲ್ ಬಂದಿದೆ.
ಅನುಮಾನದಿಂದ ಸಂಬಂಧಪಟ್ಟ ಕಚೇರಿಗೆ ಕಾಲ್ ಮಾಡಿ ಕೇಳಿದಾಗಲೇ ವೃದ್ಧ ದಂಪತಿಗೆ ಕೋಟಿ ಪಂಗನಾಮ ಆಗಿರುವುದು ಗೊತ್ತಾಗಿದೆ. ಈ ಸಂಬಂಧ ದಂಪತಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Old Couple Cheating Cyber Crime Samsung lottery


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ