‘ಮದಗಜ’ನಿಗೆ ಆಶಿಕಾ ಹೀರೋಯಿನ್

Ashika in Madagaja

15-02-2020

ನೀನಾಸಂ ಸತೀಶ್‍ ಮತ್ತು ರಚಿತಾ ರಾಮ್‍ ಅಭಿನಯದ ‘ಅಯೋಗ್ಯ’ ಚಿತ್ರ ಜನಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿತ್ತು. ಈ ಚಿತ್ರದ ‘ಏನಮ್ಮಿ ಏನಮ್ಮಿ..’ ಎಂಬ ಗೀತೆಯಂತೂ ಪಡ್ಡೆಹುಡುಗರು ದಿನವೆಲ್ಲ ಗುನುಗುವ ಹಾಡಾಗಿತ್ತು.

ಮೊದಲ ಚಿತ್ರದಲ್ಲೇ ಇಂಥದೊಂದು ಹೈಪ್‍ ಸೃಷ್ಟಿಸಿದ ನಿರ್ದೇಶಕ ಮಹೇಶ್ ಕುಮಾರ್‍ ಈಗ ಮತ್ತೊಂದು ಚಿತ್ರಕ್ಕೆ ಅಣಿಯಾಗಿದ್ದಾರೆ. ರೋರಿಂಗ್‍ ಸ್ಟಾರ್‍ ಮುರಳಿ ನಾಯಕರಾಗಿರುವ ‘ಮದಗಜ’ ಮಹೇಶ್‍ ನಿರ್ದೇಶನದಲ್ಲಿ ಮೂಡಿಬರಲಿದೆ.

ಬಾಲಿವುಡ್‍ ನಟಿಯೊಬ್ಬರು ಈ ಚಿತ್ರದ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಗುಸುಗುಸು ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿತ್ತು. ಆದರೀಗ ಪ್ರತಿಭಾವಂತ ನಟಿ ಆಶಿಕಾ ರಂಗನಾಥ್‍ ಈ ಜಾಗವನ್ನು ಭರ್ತಿಮಾಡಲಿದ್ದಾರೆ ಎಂಬ ಪ್ರಕಟಣೆ ಹೊರಬಿದ್ದಿದೆ.

ಲಂಗ-ದಾವಣಿ ತೊಟ್ಟು, ಕೈನಲ್ಲಿ ಬುಟ್ಟಿ-ಸಲಿಕೆ ಇಟ್ಟುಕೊಂಡಿರುವ ಹಳ್ಳಿ ಹುಡುಗಿಯಂತೆ ಆಶಿಕಾ ಪೋಸ್‍ ನೀಡಿರುವ ಚಿತ್ರಗಳು ಈಗಾಗಲೇ ಜನಮೆಚ್ಚುಗೆಗೆ ಪಾತ್ರವಾಗಿವೆ. ಯಾವುದೇ ಮೇಕಪ್‍ ಇಲ್ಲದ ಡೀಗ್ಲಾಮರೈಸ್ಡ್‍ ಪಾತ್ರ ಇದಾಗಿದ್ದು, ಬಿಸಿಲಿನಲ್ಲಿ ನಿರಂತರ ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎನ್ನಲಾಗಿದೆ. ಈ ಎಲ್ಲ ಷರತ್ತುಗಳಿಗೂ ಆಶಿಕಾ ಒಪ್ಪಿರುವುದು ಆಕೆಯಲ್ಲಿನ ಬದ್ಧತೆಗೆ ದ್ಯೋತಕ ಎಂದು ನಿರ್ದೇಶಕರು ಮೆಚ್ಚುಗೆಯ ಸುರಿಮಳೆ ಸುರಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Madagaja Ashika Ranganath Srimurali Mahesh Kumar


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ