‘ಹ್ಯಾಟ್ರಿಕ್’ ಸಂಭ್ರಮದಲ್ಲಿ ಕೇಜ್ರಿವಾಲ್

Kejriwal Hat tric

15-02-2020

ನವದೆಹಲಿ: ಒಂದಿಡೀ ದೇಶದ ಗಮನವನ್ನೆಲ್ಲ ತನ್ನತ್ತ ಸೆಳೆದುಕೊಂಡಿತ್ತು ದೆಹಲಿ ವಿಧಾನಸಭಾ ಚುನಾವಣೆ. ಅಲ್ಲಿನ ಮತದಾರರ ಆಶಯದಂತೆಯೇ ಮತ್ತು ಬಹುತೇಕ ಮಾಧ್ಯಮಗಳು ಮುನ್ನುಡಿದಂತೆಯೇ ಆಮ್‍ ಆದ್ಮಿ ಪಕ್ಷಕ್ಕೆ ಭರ್ಜರಿ ವಿಜಯ ದಕ್ಕಿ, ಅದರ ಮುಖ್ಯಸ್ಥ ಅರವಿಂದ್‍ ಕೇಜ್ರಿವಾಲ್‍ ಮೂರನೇ ಬಾರಿಗೆ ‘ದೆಹಲಿ ಸಿಂಹಾಸನಾಧೀಶ್ವರ’ ಎನಿಸಿಕೊಳ್ಳಲಿದ್ದಾರೆ.

70 ಸದಸ್ಯಬಲದ ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಆಮ್‍ ಆದ್ಮಿ ಮಡಿಲಿಗೆ 62 ಸ್ಥಾನಗಳು, ಬಿಜೆಪಿಗೆ 8 ಸ್ಥಾನಗಳು ದಕ್ಕಿದರೆ, ಒಂದೂ ಸ್ಥಾನ ಪಡೆಯಲಾಗದೆ ಕಾಂಗ್ರೆಸ್‍ ಮುಗ್ಗರಿಸಿದ್ದು ಈಗಾಗಲೇ ಗೊತ್ತಿರುವ ಸಂಗತಿ.

ದೆಹಲಿಯ ರಾಮ್‍ ಲೀಲಾ ಮೈದಾನದಲ್ಲಿ ಫೆಬ್ರವರಿ 16ರ ಭಾನುವಾರ ಬೆಳಗ್ಗೆ 10 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ಈ ಕ್ಷಣಕ್ಕೆ ಸಾಕ್ಷಿಯಾಗುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೂ ಆಹ್ವಾನ ನೀಡಲಾಗಿದೆ. ಜತೆಗೆ, ದೆಹಲಿಯ 7 ಮಂದಿ ಸಂಸದರು, ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಬಿಜೆಪಿಯ 8 ಶಾಸಕರನ್ನೂ ಆಹ್ವಾನಿಸಲಾಗಿದೆ. ಆದರೆ ಬೇರಾವುದೇ ರಾಜ್ಯದ ಮುಖ್ಯಮಂತ್ರಿಗಳಿಗೆ, ಅನ್ಯ ರಾಜಕೀಯ ನಾಯಕರಿಗೆ ಈ ಸಮಾರಂಭಕ್ಕೆ ಆಹ್ವಾನ ನೀಡಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.


ಸಂಬಂಧಿತ ಟ್ಯಾಗ್ಗಳು

AAP Kejriwal Delhi Government Oath taking ceremony


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ