ಟ್ವಿಟ್ಟರ್ ನಲ್ಲಿ ಸಿದ್ದರಾಮಯ್ಯ ಗುಡುಗು

Siddaramaiah

03-02-2020

ಬೆಂಗಳೂರು: ಪೌರತ್ವ ಕಾಯ್ದೆಗೆ ಮಾಡಿರುವ ತಿದ್ದುಪಡಿಯೇ ಸಂವಿಧಾನ ವಿರೋಧಿಯಾದುದು. ಇದಕ್ಕೆ ಯಾವ ಕಾನೂನಿನ ಮಹತ್ವ ಕೂಡಾ ಇಲ್ಲ. ಈ ವಿಚಾರದ ಬಗ್ಗೆ ಬಿಜೆಪಿ ನಾಯಕರು ಸುಳ್ಳು ಮಾಹಿತಿ ನೀಡಿ, ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್​ ಮಾಡಿದ್ದಾರೆ.

ಸಂವಿಧಾನ ರಚನಾ ಸಮಿತಿಯ 289 ಸದಸ್ಯರಲ್ಲಿ ಎಲ್ಲ ಪಕ್ಷಗಳ ನಾಯಕರು ಇದ್ದರು. ಜಾತಿ, ಧರ್ಮ, ಲಿಂಗದ ಆಧಾರದ ಮೇಲೆ ಪೌರತ್ವ ನಿರ್ಧರಿಸುವಂತಿಲ್ಲ ಎಂದು ಎಲ್ಲರು ಒಪ್ಪಿದ ಮೇಲೆಯೇ ಸಂವಿಧಾನ ಅಂಗೀಕೃತಗೊಂಡದ್ದು. ಸಂವಿಧಾನದ ಈ ಮೂಲ‌ ಆಶಯವನ್ನು ಬದಲಿಸಲು ಯಾವ ಸರ್ಕಾರಕ್ಕೂ ಅಧಿಕಾರವಿಲ್ಲ ಎಂದು ಎಚ್ಚರಿಕೆ ನೀಡಿದರು.

ದೇಶ ವಿಭಜನೆಯಾಗಿ ಧರ್ಮದ ಆಧಾರದಲ್ಲಿ ರಚನೆಯಾದದ್ದು ಪಾಕಿಸ್ತಾನ, ಭಾರತ ಅಲ್ಲ. ಅಂದು ದೇಶ ವಿಭಜನೆಯಾಗಬಾರದೆಂದು ಹೋರಾಡಿದ ಮಹಾತ್ಮ ಗಾಂಧಿಯವರನ್ನು ಕೊಂದವರನ್ನು ಪೂಜಿಸುವ ಜನರೇ ಇಂದು ಧರ್ಮದ ಆಧಾರದಲ್ಲಿ ದೇಶ ಒಡೆಯಲು ಸಿಎಎ, ಎನ್‌ಆರ್‌ಸಿ ಜಾರಿಗೊಳಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ಕೊಂದವನನ್ನು ತಲೆಮೇಲೆ ಹೊತ್ತು ತಿರುಗುವವರು ದೇಶದ್ರೋಹಿಗಳಲ್ಲವೇ? ಸಂವಿಧಾನದಲ್ಲಿ ಅವಕಾಶವೇ ಇಲ್ಲದ ಸಿಎಎ, ಎನ್‌ಆರ್‌ಸಿ ಜಾರಿಗೆ ಮುಂದಾಗಿರುವವರು ದೇಶದ್ರೋಹಿಗಳಲ್ಲವೇ? ಈಗ ಹೇಳಲಿ ಸಂವಿಧಾನ ಉಳಿಸುವ ನಮ್ಮ ಹೋರಾಟ ಹೇಗೆ ದೇಶದ್ರೋಹವಾಗುತ್ತದೆ ಎಂದು? ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Siddaramaiah CAA Twitter BJP


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ