ನಿರ್ಮಲಾ ‘ಫ್ಲಾಪ್ ಷೋ’..!

Budget 2020

01-02-2020

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‍ ಅವರು ಮಂಡಿಸಿರುವ ಕೇಂದ್ರ ಬಜೆಟ್‍, ಯಾವುದೇ ಭರವಸೆಯ ಆಯಾಮಗಳಿಲ್ಲದೆ ‘ಫ್ಲಾಪ್‍ ಷೋ’ ಆಗಿದೆ.

ಇದು ಕೇವಲ ಒಬ್ಬಿಬ್ಬರ ಅಭಿಪ್ರಾಯವಲ್ಲ, ಮಾರುಕಟ್ಟೆಯ ಹತ್ತು ಹಲವು ವಲಯಗಳಿಂದ ಇಂಥದೇ ಅಸಮಾಧಾನ ವ್ಯಕ್ತವಾಗಿದೆ. ಐದು ಲಕ್ಷದವರೆಗಿನ ಆದಾಯ ಪಡೆಯುವವರಿಗೆ ಯಾವುದೇ ತೆರಿಗೆ ಅನ್ವಯವಾಗುವುದಿಲ್ಲ ಎಂದು ತಿಳಿಸಲಾಗಿದ್ದರೂ, ತೆರಿಗೆದಾರರು ಅಂಥದೊಂದು ಆರ್ಥಿಕ ನಿರ್ವಹಣಾ ಪರಿಸ್ಥಿತಿಯನ್ನು ಈಗಾಗಲೇ ರೂಢಿಸಿಕೊಂಡಿರುವುದರಿಂದ ಈ ಘೋಷಣೆ ಅವರಲ್ಲಿ ಅಷ್ಟೇನೂ ಸಂತೋಷವನ್ನುಂಟುಮಾಡಿಲ್ಲ.

ಕಳೆದ ಬಾರಿ ಮಂಡನೆಯಾಗಿದ್ದ ಬಜೆಟ್‍ಗೆ ಹೋಲಿಸಿದರೆ, ಆರ್ಥಿಕತೆಯ ಚೇತರಿಕೆಗೆ ಇಂಬುಕೊಡುವಂಥ ಮಹತ್ವದ ಅಂಶಗಳೇನೂ ಈ ಬಾರಿ ಹೊಮ್ಮಿಲ್ಲ; ಬದಲಿಗೆ ಕಳೆದ ಬಜೆಟ್‍ನ ಮುಂದುವರಿಕೆಯ ಭಾಗದಂತೆ ಇದು ಕಾಣಿಸುತ್ತಿದೆ ಮತ್ತು ಪೇಲವವಾಗಿದೆ ಎಂದು ಬಹುತೇಕರು ಅಭಿಪ್ರಾಯಪಟ್ಟಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Nirmala Sitaraman Budget 2020 Tax Income tax


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ