'ಸಜ್ಜನ' ಸೂದ್ ರಾಜ್ಯ ಪೊಲೀಸ್ ಮುಖ್ಯಸ್ಥ

Praveen Sood

01-02-2020

ಬೆಂಗಳೂರು: ಸಿಐಡಿ ಡಿಜಿಪಿಯಾಗಿದ್ದ ಪ್ರವೀಣ್‍ ಸೂದ್‍ ಅವರು ಕರ್ನಾಟಕದ ನೂತನ ಪೊಲೀಸ್‍ ಮಹಾನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.

ಟ್ರಾಫಿಕ್ ವಲಯದ ಸುಧಾರಣೆಯ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ಸೂದ್‍ ಅವರು ಮೂಲತಃ ಹಿಮಾಚಲ ಪ್ರದೇಶದವರಾಗಿದ್ದು, ಬಿ.ಟೆಕ್‍ ಮತ್ತು ಸಿವಿಲ್‍ ಇಂಜಿನಿಯರಿಂಗ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 1986ರ ಬ್ಯಾಚ್‍ನ ಐಪಿಎಸ್‍ ಅಧಿಕಾರಿಯಾಗಿರುವ ಇವರು ಬೆಂಗಳೂರು ಮತ್ತು ಮೈಸೂರಿನ ಪೊಲೀಸ್‍ ಕಮಿಷನರ್‍ ಹುದ್ದೆಯನ್ನೂ ಅಲಂಕರಿಸಿದ್ದರು ಎಂಬುದಿಲ್ಲಿ ಸ್ಮರಣಾರ್ಹ.

1996ರಲ್ಲಿ ಮುಖ್ಯಮಂತ್ರಿಗಳ ಪದಕ, 2002ರಲ್ಲಿ ಪೊಲೀಸ್ ಪದಕ, 2011ರಲ್ಲಿ ರಾಷ್ಟ್ರಪತಿ ಪದಕದಂಥ ಪುರಸ್ಕಾರಗಳಿಗೆ ಭಾಜನರಾಗಿರುವ ಪ್ರವೀಣ್‍ ಸೂದ್‍, ‘ಪಿಂಕ್‍ ಹೊಯ್ಸಳ’, ‘ನಮ್ಮ 100’, ‘ಸುರಕ್ಷಾ ಆಪ್‍’ ಮೊದಲಾದವನ್ನು ಪರಿಚಯಿಸಿದವರೂ ಹೌದು. ಸೂದ್‍ ಅವರ ಪತ್ನಿ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Praveen Sood CID Police commissioner Bengaluru


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ