ಚನ್ನಗಿರಿಯಲ್ಲಿ ರಕ್ತದಾನ ಶಿಬಿರ

Samuha Shakti

25-01-2020

ಖ್ಯಾತ ವೈದ್ಯರು, ಸಮಾಜ ಸೇವಕರೂ ಆಗಿದ್ದ ದಿ. ಡಾ. ಎ. ಬಸವಣ್ಣಯ್ಯನವರ ಸ್ಮರಣಾರ್ಥವಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಸಮೂಹ ಶಕ್ತಿ ಸಂಘಟನೆ ಸಹಯೋಗದೊಂದಿಗೆ ಚನ್ನಗಿರಿಯ ಶ್ರೀ ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ರಕ್ತದಾನ ಶಿಬಿರ ನಡೆದಿದ್ದು, ಶಿಬಿರದಲ್ಲಿ ವಿದ್ಯಾರ್ಥಿಗಳೂ ಸೇರಿದಂತೆ 70ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದ್ದಾರೆ.  

ಸಮೂಹ ಶಕ್ತಿ ಸಂಘಟನೆಯ ಪ್ರಧಾನ ಪ್ರೇರಕರಾದ ದೀಪಕ್ ತಿಮ್ಮಯ ಅವರಿಂದ ಸಂವಾದ ಕಾರ್ಯಕ್ರಮ ನಡೆಯಿತು. ಇನ್ನು ಕಾರ್ಯಕ್ರಮದಲ್ಲಿ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ, ಚನ್ನಗಿರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ. ಬಿ.ವಿ.ವೀರಪ್ಪ, ಸಮೂಹ ಶಕ್ತಿ ಬಳಗ, ಚನ್ನಗಿರಿಯ ಪ್ರಮುಖರಾದ ರವಿ ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೆ ಯುವ ರೆಡ್ ಕ್ರಾಸ್ ಘಟಕ, ಎನ್ ಎಸ್ ಎಸ್, ರೋವರ್ಸ್, ರೇಂಜರ್ಸ್ ಹಾಗೂ ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ರಕ್ತ ಶೇಖರಣಾ ಕೇಂದ್ರದವರು ಸಾಥ್ ನೀಡಿದ್ದರು.


ಸಂಬಂಧಿತ ಟ್ಯಾಗ್ಗಳು

Samooha Shakti Deepak Timmaih Blood Donation Channagiri


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ