ಮಗಳ ಮದುವೆಗೆ ಸಾಲ ಸಿಗದಿದ್ದಕ್ಕೆ ತಂದೆ ಆತ್ಮ ಹತ್ಯೆ !

Kannada News

13-06-2017

ಬೆಂಗಳೂರು:- ಮಗಳ ಮದುವೆಗೆ ಸಾಲ ದೊರೆಯದಿರುವುದಕ್ಕೆ ನೊಂದ ತಂದೆ ನೇಣಿಗೆ ಶರಣಾಗಿರುವ ದುರ್ಘಟನೆ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಅನ್ನಪೂರ್ಣೇಶ್ವರಿ ನಗರದ 2ನೇ ಹಂತದ ಕೃಷ್ಣಮೂರ್ತಿ (57) ಎಂದು ಗುರುತಿಸಲಾಗಿದೆ. ಮಗಳ ಮದುವೆಗೆ ಸಾಲ ದೊರೆಯದಿದ್ದರಿಂದ ನೊಂದ ಅವರು, ಸೋಮವಾರ ರಾತ್ರಿ 10ರ ವೇಳೆ ಮನೆಯಲ್ಲಿ ಎಲ್ಲರೂ ಮಲಗಿದ್ದಾಗ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

 



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ