ಡಿಕೆ ಬೇಡ ಅಂದ್ರಾ ಅಧ್ಯಕ್ಷಗಿರಿ?

Did DK refuse kpcc presidentship?

24-01-2020

ಬೆಂಗಳೂರು: ಕೆಪಿಸಿಸಿ ಗಾದಿಗೆ ಅಧ್ಯಕ್ಷರನ್ನು ಆಯ್ಕೆಮಾಡುವ ವಿಚಾರ ಕಾಂಗ್ರೆಸ್ ಪಾಲಿಗೆ ಕಗ್ಗಂಟಾಗಿಯೇ ಪರಿಣಮಿಸಿದೆ. ಡಿ.ಕೆ. ಶಿವಕುಮಾರ್ ಅವರು ಈ ಹುದ್ದೆಯನ್ನು ಅಲಂಕರಿಸಲಿದ್ದಾರೆ ಎನ್ನಲಾಗುತ್ತಿದೆಯಾದರೂ ಅದು ಅಂದುಕೊಂಡಷ್ಟು ಸುಲಭವಿಲ್ಲ ಎಂಬುದು ರಾಜಕೀಯ ತಜ್ಞರ ಅಭಿಮತ. ಕಾರಣ, ಪಕ್ಷದೊಳಗೇ ಅವರಿಗೆ ಸಾಕಷ್ಟು ವಿರೋಧವಿದೆ.

ಡಿ.ಕೆ. ಶಿವಕುಮಾರ್ ಅಧ್ಯಕ್ಷರಾದರೆ ಸಿದ್ದರಾಮಯ್ಯ ಜೊತೆ ಹೊಂದಾಣಿಕೆ ಸುಲಭವಲ್ಲ, ಹೀಗಾಗಿ ನೀವೇ ಅಧ್ಯಕ್ಷ ಸ್ಥಾನ ಒಪ್ಪಿಕೊಳ್ಳಬೇಕು ಎಂದು ಖರ್ಗೆಯವರನ್ನು ಅವರ ಬೆಂಬಲಿಗರು ಒತ್ತಾಯಿಸಿದರು ಎನ್ನಲಾಗಿದೆ. ಆದರೆ ತಾವು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ, ಆ ಬಗ್ಗೆ ತಮಗೆ ಆಸಕ್ತಿಯೂ ಇಲ್ಲ ಎಂದು ಖರ್ಗೆ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಆದರೆ ಅಧ್ಯಕ್ಷಗಿರಿಗೆಂದು ಚರ್ಚೆಗೆ ಬಂದಿರುವ ಹೆಸರುಗಳಲ್ಲಿ ಎಲ್ಲರೂ ಹಿಂದೇಟು ಹಾಕಿದರೆ ಆ ಸ್ಥಾನ ಶಿವಕುಮಾರ್ ಅವರಿಗೆ ಒಲಿಯಬಹುದು. ಡಿಕೆ ಒಂದು ಪಕ್ಷ ಅಂಥ ಪರಿಸ್ಥಿತಿಯಲ್ಲಿ ಕೆಪಿಸಿಸಿ ಅಧ್ಯಕ್ಷಗಿರಿ ಒಪ್ಪಿದಲ್ಲಿ ಉಳಿದವರ ವಿರೋಧ ಮತ್ತು ಅಸಹಕಾರದ ನಡುವೆ ಪಕ್ಷವನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುವಲ್ಲಿ ವಿಫಲರಾಗುವ ಸಾಧ್ಯತೆಯೇ ಹೆಚ್ಚು ಎನ್ನಲಾಗಿದೆ. ಸದ್ಯಕ್ಕೆ ಅಧ್ಯಕ್ಷರಾಗುವ ಬದಲಿಗೆ ಬೇರೆಯವರು ಅಧ್ಯಕ್ಷರಾಗುವಂತೆ ನೋಡಿಕೊಂಡು, ಮುಂಬರುವ ಚುನಾವಣೆ ಹೊತ್ತಿಗೆ ಪಕ್ಷದ ಸಾರಥ್ಯ ವಹಿಸಿಕೊಂಡು ಉತ್ತಮ ಫಲಿತಾಂಶ ತಂದುಕೊಟ್ಟಲ್ಲಿ ಅದು ಅವರ ರಾಜಕೀಯ ಮಹತ್ವಾಕಾಂಕ್ಷೆಯ ಈಡೇರಿಕೆಗೆ ಮತ್ತೊಂದು ಚಿಮ್ಮುಹಲಗೆಯಾಗಿ ಪರಿಣಮಿಸುವ ಸಾಧ್ಯತೆ ಹೆಚ್ಚು ಅನುಕೂಲ ಎಂದು ಸುದ್ದಿಮೂಲಗಳು ಸೂಪರ್‍ಸುದ್ದಿಗೆ ತಿಳಿಸಿವೆ.


ಸಂಬಂಧಿತ ಟ್ಯಾಗ್ಗಳು

DK Shivkumar KPCC Kharge Congress


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


KPCC best president Dk shivakumar
  • Muni Anjanappa
  • Security