ಕನ್ನಡತಿಯಲ್ಲೂ ಪುಟ್ಟಗೌರಿಯ ಉಪದೇಶ!

Kannadati Ranjani Raghavan

24-01-2020

ಪುಟ್ಟಗೌರಿ ಧಾರಾವಾಹಿಯಿಂದ ನಾಡಿನ ಮನೆ ಮಾತಾಗಿರುವ ರಂಜನಿ ರಾಘವನ್ ಕನ್ನಡತಿಯಾಗಿ ಮತ್ತೆ ಕನ್ನಡಿಗರನ್ನು ಮನರಂಜಿಸಲು ಬರುತ್ತಿದ್ದಾರೆ. ಈ ಕುರಿತು ಈಗಾಗಲೇ ಪ್ರೋಮೋ ಗಳು ಕೂಡ ಪ್ರಸಾರವಾಗುತ್ತಿವೆ. ಕನ್ನಡ ಭಾಷೆಯ ಬಗ್ಗೆ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಟೀಚರ್ ಆಗಿ ರಂಜನಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಕನ್ನಡ ಭಾಷೆಯ ಮೂಲ ಪದ, ವ್ಯಾಕರಣದ ಬಗ್ಗೆ ಕೂಡ ಹೇಳಿಕೊಡುತ್ತಿದ್ದಾರೆ. ಆದ್ರೆ ಪ್ರೋಮೋ ನೋಡಿದ ಪ್ರೇಕ್ಷಕರಿಗೆ ಅದ್ಯಾಕೋ ಇಲ್ಲೂ ಕೂಡ ಬೋಧನೆಯೇ ಬಂಡವಾಳ ಮಾಡಿಕೊಳ್ಳಲಾಗಿದೆ ಎನಿಸಲಾರಂಭಿಸಿದೆ.

ಹೌದು.. ರಂಜನಿ ರಾಘವನ್ ಧ್ವನಿಯೇನೋ ಚೆನ್ನಾಗಿದೆ. ಆದರೆ ಧ್ವನಿ ಚೆನ್ನಾಗಿದೆ ಎಂಬ ಕಾರಣಕ್ಕೆ ವಿಪರೀತ ಮಾತನಾಡಿಸಿ, ಉಪದೇಶ ನೀಡಿಸಲಾಗುತ್ತಿದೆಯೇ ಅನ್ನೋ ಅನುಮಾನ ಜನರನ್ನು ಕಾಡುತ್ತಿದೆ.

ಈ ಮೊದಲು ಪುಟ್ಟಗೌರಿ ಧಾರಾವಾಹಿಯಲ್ಲೂ ಕೂಡ ಆಕೆಯ ಅಸ್ತಿತ್ವವೇ ನಾಶವಾಗುತ್ತಿದ್ದರೂ ಜೀವನ, ವ್ಯಕ್ತಿತ್ವ ಹಾಗೂ ಅಸ್ತಿತ್ವದ ಬಗ್ಗೆ ವಿಪರೀತ ಬೊಧನೆ ಮಾಡಿಸಲಾಗುತ್ತಿತ್ತು. ಆದರೆ ಹೊಸದಾಗಿ ಪ್ರಸಾರವಾಗುವ ಕನ್ನಡತಿ ಧಾರಾವಾಹಿಯಲ್ಲೂ ಕೂಡ ಕನ್ನಡದ ಬಗ್ಗೆ ಅದೇ ರಾಗವನ್ನೇ ಹಾಡಿಸಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ನೋಡುಗರನ್ನೂ ವಿದ್ಯಾರ್ಥಿಗಳೆಂದೇ ಪರಿಗಣಿಸಲಾಗಿದೆಯೇ ಅನ್ನೋ ಅನುಮಾನ ಪ್ರೇಕ್ಷರನ್ನು ಕಾಡುತ್ತಿರುವುದು ಸುಳ್ಳಲ್ಲ.


ಸಂಬಂಧಿತ ಟ್ಯಾಗ್ಗಳು

Kannadati Ranjani Colors Kannada Serial


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ