ಕರ್ನಾಟಕದಲ್ಲಿರೋದು ಯಾವ ಬಿಜೆಪಿ?

Karnataka BJP

24-12-2019

ಕರ್ನಾಟಕದಲ್ಲಿ ಆಪರೇಷನ್ ಬಿಜೆಪಿ ಮೂಲಕವೇ ಅಧಿಕಾರಕ್ಕೆ ಬಂದ ಬಿ.ಎಸ್.ಯಡಿಯೂರಪ್ಪ ಸರ್ಕಾರಕ್ಕೆ ಪ್ರತಿಬಾರಿಯಂತೆ ಈ ಬಾರಿಯೂ ಸಾಕಷ್ಟು ಪ್ರಮುಖ ಸಮಸ್ಯೆಗಳು ಎದುರಾಗಿವೆ. ಅದರಲ್ಲಿ ಪ್ರಮುಖವಾಗಿದ್ದು ಎಂದರೆ ಬಿಜೆಪಿಯಲ್ಲಿರುವ ಆಂತರಿಕ ಸಮಸ್ಯೆ. ಮೂಲ ಬಿಜೆಪಿಗರು ಹಾಗೂ ವಲಸಿಗ ಬಿಜೆಪಿಯವರ ಕೋಲ್ಡ್ ವಾರ್.

ಸರ್ಕಾರ ರಚಿಸುವುದಕ್ಕಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಿಂದ ಅತೃಪ್ತ ಶಾಸಕರನ್ನು ಕರೆತಂದು ರಾಜೀನಾಮೆ ಕೊಡಿಸಿ, ಸರ್ಕಾರ ರಚಿಸಿ ಕೊನೆಗೆ ಉಪಚುನಾವಣೆಯಲ್ಲಿ ಅದೇ ಅನರ್ಹರಾಗಿದ್ದ ಶಾಸಕರನ್ನು ಗೆಲ್ಲಿಸುವಲ್ಲಿ ಸಿಎಂ ಯಡಿಯೂರಪ್ಪ ಬಹುತೇಕ ಯಶಸ್ವಿಯೂ ಆಗಿದ್ದಾರೆ.

ಆದರೆ ಈಗೀಗ ಮೂಲ ಬಿಜೆಪಿಗರಿಗಿಂತ ವಲಸಿಗರೇ ಪಕ್ಷದಲ್ಲಿ ಹೆಚ್ಚಾಗುತ್ತಿದ್ದಾರೆ ಎಂಬುದು ಮೂಲ ಬಿಜೆಪಿಗರ ಅಳಲು. ಹೀಗೆಯೇ ವಲಸಿಗರ ಸಂಖ್ಯೆ ಹೆಚ್ಚಾಗುತ್ತ ಹೋದಂತೆ ಮೂಲ ಬಿಜೆಪಿ ಹೋಗಿ ಹೊಸ ಬಿಜೆಪಿಯೇ ನಿರ್ಮಾಣವಾಗುತ್ತೆ ಎಂದು ಮೂಲ ಬಿಜೆಪಿಗರು ಅಸಮಾಧಾನ ಹೊರಹಾಕುತ್ತಿದ್ದಾರಂತೆ.


ಸಂಬಂಧಿತ ಟ್ಯಾಗ್ಗಳು

Karnataka BJP B S yedyurappa Congress CM


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ