ಮತ್ತೆ ಗೋತಾ ಹೊಡೆದ ಕೋಟ್ಯಧಿಪತಿ!

Kannadada Kotyadhipati

07-12-2019

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಕಿರುತೆರೆಯ ಶೋ ಕನ್ನಡದ ಕೋಟ್ಯಧಿಪತಿ ಈ ಬಾರಿಯೂ ಟಿಆರ್ಪಿ ಗಳಿಸುವಲ್ಲಿ ವಿಫಲವಾಗಿದೆ. ವಾರಂತ್ಯದಲ್ಲಿ ಪ್ರಸಾರವಾಗುವ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡುತ್ತಿದ್ದರೂ ಆರಂಭದಿಂದಲೂ ಟಿಆರ್ ಪಿ ಗಳಿಸುವಲ್ಲಿ ಅಷ್ಟೇನೂ ಸಫಲವಾಗಿರಲಿಲ್ಲ. ಅಷ್ಟೇ ಏನು.. ಟಿಆರ್ ಪಿ ಯಲ್ಲಿ ಕೇವಲ 3 ಪಾಯಿಂಟ್ ಗಳಿಸೋಕೂ ಒದ್ದಾಡಿದೆ ಅಂದ್ರೆ ನಂಬಲೇ ಬೇಕು.

ಮೊದಲಿನಿಂದಲೂ ಸಾಕಷ್ಟು ಯಡವಟ್ಟುಗಳನ್ನು ಮಾಡಿಕೊಳ್ಳುತ್ತಲೇ ಬಂದ ಕೋಟ್ಯಧಿಪತಿ ಕಾರ್ಯಕ್ರಮವನ್ನು ಪ್ರೇಕ್ಷಕ ಅಷ್ಟೊಂದು ಇಷ್ಟಡಲೇ ಇಲ್ಲ.  ಸಾಮಾನ್ಯರು ಸೇರಿದಂತೆ ಸೆಲೆಬ್ರಿಟಿಗಳನ್ನು ಕರೆತಂದರೂ… ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾರ್ಯಕ್ರಮ ನಡೆಸಿಕೊಟ್ಟರೂ, ಕಾರ್ಯಕ್ರಮ ಪ್ರೇಕ್ಷಕರ ಮನಮುಟ್ಟುವಲ್ಲಿ ವಿಫಲವಾಗಿದೆ.

ಇನ್ನು ಸಾಲು ಸಾಲು ಪ್ಲಾಪ್ ಶೋಗಳನ್ನು ನೀಡುತ್ತಿರುವ ಕಲರ್ಸ್ ಕನ್ನಡ ಚಾನೆಲ್, 2ನೇ ಸ್ಥಾನಕ್ಕೇ ತೃಪ್ತಿಪಟ್ಟುಕೊಳ್ಳುತ್ತಿದೆ ಎಂದೇ ಹೇಳಬಹುದು.


ಸಂಬಂಧಿತ ಟ್ಯಾಗ್ಗಳು

TV Show Kannadada Kotyadhipati Puneeth Rajkumar Colors Kannada


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ