ಲಾರಿ ಡಿಕ್ಕಿ ಹೊಡೆದ ಪರಿಣಾಮ 10 ತಿಂಗಳ ಮಗು ಸಾವು !

Kannada News

13-06-2017

ಬೆಂಗಳೂರು:- ಸುಂಕದಕಟ್ಟೆಯ ಬಸ್ ನಿಲ್ದಾಣದ ಬಳಿ ಮಂಗಳವಾರ ನಸುಕಿನಲ್ಲಿ  ಹಿಂದಿನಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿ ಹೋಗುತ್ತಿದ್ದ 10 ತಿಂಗಳ ಮಗು ಮೃತಪಟ್ಟಿರು ದಾರುಣ ಘಟನೆ ನಡೆದಿದೆ. ಘಟನೆಯಲ್ಲಿ  ತಂದೆ-ತಾಯಿ ಪಾರಾಗಿದ್ದಾರೆ. ಮಾಗಡಿ ರಸ್ತೆಯ ಕೊಡಿಗೇಹಳ್ಳಿಯ ರಾಜಪ್ಪ ಮಲ್ಲನಗೌಡ ಹಾಗೂ ಶೈಲಜಾ ದಂಪತಿಯ ಪುತ್ರ ಮೃತ ದುರ್ದೈವಿ. ಮೆಡಿಕಲ್ ಸ್ಟೋರ್ ನಡೆಸುತ್ತಿದ್ದ ಮಲ್ಲನಗೌಡ ಅವರು ಮುಂಜಾನೆ 5.30ರ ವೇಳೆ ಪತ್ನಿ ಶೈಲಜಾ ಅವರನ್ನು ಹಿಂದೆ ಕೂರಿಸಿಕೊಂಡು ಮಗುವನ್ನು ಪಲ್ಸರ್ ಬೈಕ್ ಟ್ಯಾಂಕ್ ಮೇಲೆ ಕೂರಿಸಿಕೊಂಡು ಸುಂಕದಕಟ್ಟೆ ಬಸ್ ನಿಲ್ದಾಣದ ಬಳಿ ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದು ಟ್ಯಾಂಕ್ ಮೇಲೆ ಕುಳಿತಿದ್ದ ಮಗು ಕೆಳಗೆ ಬಿದ್ದು ಮೃತಪಟ್ಟರೆ, ಮಲ್ಲನಗೌಡ, ಶೈಲಜಾ ಅವರು ಸಣ್ಣ-ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ