ವರ್ಬೆಟಲ್ ನ್ಯಾಷನಲ್ ಡಿಬೆಟ್ ಚಾಂಪಿಯನ್ ಶಿಪ್ ಗೆದ್ದ ವಿದ್ಯಾಶಿಲ್ಪ್ ಅಕಾಡೆಮಿ

Vidya Shilp Academy wins the 2nd edition of Verbattle National - School Debate Championship

05-12-2019

ಬೆಂಗಳೂರಿನ ಟಿವಿ ಹೌಸ್ ನೆಟ್ ವರ್ಕ್ ಸಹಯೋಗದೊಂದಿಗೆ ನಡೆದ ವರ್ಬೆಟಲ್ ನ್ಯಾಷನಲ್ ಡಿಬೆಟ್ ಚಾಂಪಿಯನ್ ಶಿಪ್ ನಿನ್ನೆ ಮುಕ್ತಾಯಗೊಂಡಿತು. ಬೆಂಗಳೂರಿನ ವಿದ್ಯಾಶಿಲ್ಪ್ ಅಕಾಡೆಮಿಯ ಜೈವೀರ್ ಹಾಗೂ ತಿಶಾ ತಂಡ ಚರ್ಚಾ ಸ್ಪರ್ಧೆಯ ವಿಜೇತರಾಗಿ ಹೊರಹೊಮ್ಮಿದ್ದಾರೆ. ಇನ್ನು, ತಮಿಳುನಾಡಿನ ಇರೋಡ್ ನ ಸಿಎಸ್ ಅಕಾಡೆಮಿಯ ವರ್ಷಾ ಮತ್ತು ವಿಶ್ವಜಿತ್ ತಂಡ ಹಾಗೂ ಬೆಂಗಳೂರಿನ ವಿದ್ಯಾಶಿಲ್ಪ್ ಅಕಾಡೆಮಿಯ ಸಾಹಿಲ್ ಮತ್ತು ಆರುಷ್ ತಂಡ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.

ಮೊದಲ ಬಹುಮಾನ ವಿಜೇತ ಜೈವೀರ್ ಹಾಗೂ ತಿಶಾ ತಂಡ ಬರೋಬ್ಬರಿ 2 ಲಕ್ಷ ರೂ. ಬಹುಮಾನ ತನ್ನದಾಗಿಸಿಕೊಂಡಿದ್ದಾರೆ. ಜೊತೆಗೆ ವಿಜೇತ ತಂಡದ ಮಾರ್ಗದರ್ಶಕರಾಗಿ ಬಂದ ರುಚಿ ಗುಪ್ತಾ 20,000/-ರೂ ಬಹುಮಾನ ಪಡೆದಿದ್ದಾರೆ. ಇನ್ನು ಪೈನಲ್ ಪ್ರವೇಶಿಸಿದ ಉಳಿದ ಎರಡೂ ತಂಡಗಳು ತಲಾ 50 ಸಾವಿರ ರೂ. ಬಹುಮಾನ ಪಡೆದುಕೊಂಡಿವೆ.

ಬೆಂಗಳೂರು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ವಿಜೇತರಿಗೆ ಬಹುಮಾನ ವಿತರಿಸಿದರು. ಬಳಿಕ ಮಾತನಾಡಿದ ಅವರು, ಜೀವನದಲ್ಲಿ ಧೈರ್ಯ ತುಂಬಾ ಮಹತ್ವದ್ದಾಗಿರುತ್ತದೆ. ಅದರಲ್ಲೂ ಮಾತನಾಡಲು, ನಡೆದುಕೊಳ್ಳಲು, ಟೀಕೆಗಳನ್ನು ಹಾಗೂ ಸೋಲು-ಗೆಲುವುಗಳನ್ನು ಸ್ವೀಕರಿಸಲು ಧೈರ್ಯ ಬೇಕು. ಅದನ್ನು ವಿದ್ಯಾರ್ಥಿ ಜೀವನದಿಂದಲೇ ಬೆಳೆಸಿಕೊಳ್ಳಬೇಕು ಎಂದರು.

ವರ್ಬೆಟಲ್ ಸಂಸ್ಥಾಪಕರಾದ ದೀಪಕ್ ತಿಮ್ಮಯ ಮಾತನಾಡಿ, ಭಾಗವಹಿಸಿದ ಮಾರ್ಗದರ್ಶಕರಿಗೆ ಹಾಗೂ ಶಾಲಾ ಮುಖ್ಯಸ್ಥರಿಗೆ ಧನ್ಯವಾದ ಅರ್ಪಿಸಿದರು. ಚರ್ಚಾಸ್ಪರ್ಧೆಯ ತೀರ್ಪುಗಾರರಾಗಿ ಡಾ. ಪ್ರಶಾಂತ್ ಕೇಸರಿ, ಸುಚೀಂದ್ರನಾಥ್ ಅಯ್ಯರ್, ಡಾ. ಅನಂತ್ ರಾಮನ್ ಭಾಗವಹಿಸಿದ್ದರು.  

ಚರ್ಚಾಸ್ಪರ್ಧೆಯಲ್ಲಿ ದೆಹಲಿ, ನೋಯ್ಡಾ, ತಮಿಳುನಾಡು, ಸೇರಿದಂತೆ ವಿವಿಧೆಡೆಯಿಂದ 22 ಶಾಲೆಗಳ ಒಟ್ಟು 63 ತಂಡಗಳು ಭಾಗವಹಿಸಿದ್ದವು.


ಸಂಬಂಧಿತ ಟ್ಯಾಗ್ಗಳು

Verbattle Debate Deepak Timmaiah Championship


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ