ಮೆಜೆಸ್ಟಿಕ್ ನಲ್ಲಿ ಪ್ಲಾಸ್ಟಿಕ್ ಬಾಟಲಿ ಕ್ರಷಿಂಗ್ ಮಷಿನ್ ಅಳವಡಿಕೆ

Plastic bottle crushing machine

23-11-2019

ಬೆಂಗಳೂರು : ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಾಟಲ್ ಗಳನ್ನು ನಾಶ ಮಾಡಲು ಬಾಟಲಿ ಕ್ರಷಿಂಗ್ ಯಂತ್ರವನ್ನು ನಗರದ ಮೆಜೆಸ್ಟಿಕ್ ನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗಿದೆ.
ಯಂತ್ರವು ಪ್ರತಿ ದಿನ ಕ್ರಷಿಂಗ್ ಯಂತ್ರ ೨೪೦೦ ಬಾಟೆಲ್ ಗಳನ್ನು ಪುಡಿ ಪುಡಿ ಮಾಡುವ ಸಾಮರ್ಥ್ಯ ಹೊಂದಿದೆ ಎರಡು ಲೀಟರ್ ಸಾಮರ್ಥ್ಯದ ಪ್ಲಾಸ್ಟಿಕ್ ಬಾಟೆಲ್ ಗಳನ್ನು ಯಂತ್ರ ಕೆಲವೇ ಸೆಕಂಡುಗಳಲ್ಲಿ ಪುಡಿ ಮಾಡಲಿದೆ ಇದರ ಪ್ರತಿಕ್ರಿಯೆ ಗಮನಿಸಿ ರಾಜ್ಯದ ಇತರ ನಗರಗಳ ಬಸ್‌ನಿಲ್ದಾಣಗಳಲ್ಲಿ ಅಳವಡಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಸದಾ ಜನ ಜಂಗುಳಿಯಿಂದ ಗಿಜಿ ಗುಡುತ್ತಿರುವ ಬಸ್ ನಿಲ್ದಾಣದಲ್ಲಿ ಪ್ರತಿ ದಿನವೊಂದಕ್ಕೆ ಸಾವಿರಾರು ನೀರಿನ ಪ್ಲಾಸ್ಟಿಕ್ ಬಾಟಲ್ ಬಳಕೆಯಾಗುತ್ತಿದೆ. ಪ್ರಯಾಣಿಕರು ಕುಡಿದು ಬಿಟ್ಟ ಈ ನೀರಿನ ಬಾಟೆಲ್‌ಗಳ ಸಂಗ್ರಹ-ರವಾನೆ ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ತಲೆ ನೋವಾಗಿ ಪರಿಣಮಿಸಿದೆ.
ಲಕ್ಷಾಂತರ ಪ್ರಯಾಣಿಕರು ಬಳಸಿ ಬಿಸಾಡುವ ಬಾಟಲಿ ಬಾರಿ ಪ್ರಮಾಣದಲ್ಲಿ ಕಸದ ಬುಟ್ಟಿ ಸೇರುತ್ತಿದೆ. ಇದನ್ನು ನಿಲ್ದಾಣದಿಂದ ಹೊರ ಸಾಗಿಸುವುದು. ಸಿಬ್ಬಂದಿಗಳಿಗೆ ಕಷ್ಟಕರವಾಗಿದೆ. ಪ್ರಯಾಣಿಕರಲ್ಲಿ ಅರಿವು ಮೂಡಿಸಿದರೂ ಸಹ ಪ್ಲಾಸ್ಟಿಕ್ ಬಾಟೆಲ್ ಗಳನ್ನು ಎಲ್ಲೆಂದರಲ್ಲಿ ಬಿಸಾಡುವುದು ತಪ್ಪಿಲ್ಲ.
ಪ್ಲಾಸ್ಟಿಕ್ ನೀರಿನ ಬಾಟೆಲ್ ಗಳ ಜತೆಗೆ ತಂಪು ಪಾನೀಯದ ಬಾಟೆಲ್ ಗಳು ಹೇರಳವಾಗಿ ಬಳಕೆಯಾಗುತ್ತಿದೆ. ಸದ್ಯದಲ್ಲಿಯೇ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕ್ರಷಿಂಗ್ ಮಿಷನ್ ಅಳವಡಿಸಲು ನಿರ್ಧರಿಸಲಾಗಿದ್ದು ಈ ಯಂತ್ರದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ಲಾಸ್ಟಿಕ್ ನೀರಿನ ಬಾಟೆಲ್ ಮತ್ತು ತಂಪು ಪಾನೀಯದ ಪ್ಲಾಸ್ಟಿಕ್ ಬಾಟೆಲ್ ಗಳನ್ನು ಈ ಕ್ರಷಿಂಗ್ ಯಂತ್ರಕ್ಕೆ ಹಾಕುವಂತೆ ಜನರಲ್ಲಿ ಮನವಿ ಮಾಡಲಾಗುವುದು.
ಈ ಯಂತ್ರ ಖರೀದಿ ಮತ್ತು ಅಳವಡಿಕೆಗೆ ಸಾರಿಗೆ ನಿಗಮ ಹಣ ವ್ಯಯಿಸುತ್ತಿಲ್ಲ. ಸಿ.ಎಸ್.ಅಡಿ ಫಂಡ್ ನಿಂದ ಇದನ್ನು ಖರೀದಿಸಲಾಗುತ್ತಿದೆ. ಈ ಯಂತ್ರಕ್ಕೆ ೩ ಲಕ್ಷ ರೂ ಆಗಲಿದೆ.ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ಒಂದು ಯಂತ್ರ ಮಾತ್ರ ಅಳವಡಿಕೆಯಾಗಲಿದೆ. ಇದರ ಯಶಸ್ಸು ಗಮನಿಸಿ ಉಳಿದ ನಿಲ್ದಾಣಗಳಿಗೂ ವಿಸ್ತರಿಸಲು ನಿಗಮ ನಿರ್ಧರಿಸಿದೆ.
ಕೆಎಸ್‌ಆರ್‌ಟಿಸಿ ಈ ಯಂತ್ರಕ್ಕೆ ಬೇಕಾಗುವಷ್ಟು ಜಾಗ ಮತ್ತು ವಿದ್ಯುತನ್ನು ನೀಡಲಿದೆ. ಗ್ರೀನ್ ರೀ ಸೈಕ್ಲೊ ಸಲೂಷನ್ ಪ್ರೈವೇಟ್ ಲಿಮಿಟೆಡ್ ನಿಂದ ಖರೀದಿಸಲಾಗುವುದು.


ಸಂಬಂಧಿತ ಟ್ಯಾಗ್ಗಳು

Plastic Bottle Green City Bengaluru Machine


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ