‘ಟೈಡಾಲ್’ ನಶೆಗೆ ಇಬ್ಬರು ಬಲಿ

Drug injection

23-11-2019

ಬೆಂಗಳೂರು: ಪಾರ್ಟಿ ಮಾಡುವ ವೇಳೆ ಸುಲಭವಾಗಿ ಮತ್ತೇರುವ ಕಾರಣಕ್ಕೆ ಟೈಡಾಲ್ ಮಾತ್ರೆ ಪುಡಿಮಾಡಿ ಸಿರಂಜ್‌ಗೆ ತುಂಬಿಸಿ ಚುಚ್ಚಿಕೊಂಡು ಇಬ್ಬರು ಯುವಕರು ಮೃತಪಟ್ಟ ಪ್ರಕರಣದ ಸಂಬಂಧ ಅಕ್ರಮವಾಗಿ ಔಷಧಿ ನೀಡಿದ ಮೆಡಿಕಲ್ ಸ್ಟೋರ್‌ನ ಮಾಲೀಕನನ್ನು ವೈಯಾಲಿಕಾವಲ್ ಪೊಲೀಸರು ಬಂಧಿಸಿದ್ದಾರೆ.
ರಾಜಾಜಿನಗರದ ಮನ್‌ದೀಪ್ ಫಾರ್ಮಾ ಮೆಡಿಕಲ್ ಸ್ಟೋರ್‌ನ ಮಾಲೀಕ ಮನೀಷ್ ಕುಮಾರ್ (೩೬) ಬಂಧಿತ ಆರೋಪಿಯಾಗಿದ್ದಾನೆ ರಾಜಾಜಿನಗರದ ೪ನೇ ಬ್ಲಾಕ್‌ನ ವಾಸಿಯಾಗಿದ್ದ ಮನೀಷ್ ಕುಮಾರ್, ಮೋದಿ ಆಸ್ಪತ್ರೆಯ ಸಿಗ್ನಲ್ ಬಳಿ ಮನ್‌ದೀಪ್ ಫಾರ್ಮಾ ನಡೆಸುತ್ತಿದ್ದ ಆರೋಪಿಯು ಕಾನೂನುಬಾಹಿರವಾಗಿ ಅಧಿಕ ಪ್ರಮಾಣದಲ್ ಟೈಡಾಲ್ ಮಾತ್ರೆಗಳನ್ನು ಖರೀದಿಸಿ ಮಾರಾಟ ಮಾಡಿರುವುದು ಪತ್ತೆಯಾಗಿದೆ.
ಟೈಡಾಲ್ ಮಾತ್ರೆಯನ್ನು ಪುಡಿಮಾಡಿಕೊಂಡು ಸಿರಂಜ್‌ಗೆ ಡಿಸ್ಟಲ್ ವಾಟರ್‌ಗೆ ಸೇರಿಸಿ ಸಿರಂಜ್‌ಗೆ ತುಂಬಿಸಿಕೊಂಡು ನಶೆ ಬರುವ ಕಾರಣಕ್ಕೆ ಚುಚ್ಚಿಕೊಂಡಿದ್ದ ಕೋದಂಡರಾಮಪುರದ ಅಭಿಲಾಷ್ ಹಾಗೂ ಗೋಪಿ ಮೃತಪಟ್ಟಿದ್ದರು.
ಅವರ ಜತೆ ಔಷಧಿ ಚುಚ್ಚಿಕೊಂಡಿದ್ದ ಸುಹಾನ್ ಅಲಿಯಾಸ್ ಚಿಟ್ಟೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಚೇತರಿಸಿಕೊಂಡಿದ್ದು, ಆತ ವಿಚಾರಣೆಯಲ್ಲಿ ನಶೆ (ಮತ್ತು) ಬರಿಸಿಕೊಳ್ಳಲು ಟೈಡಾಲ್ ಮಾತ್ರೆಯನ್ನು ಖರೀದಿಸಿರುವುದನ್ನು ಬಾಯ್ಬಿಟ್ಟಿದ್ದಾನೆ.
ಕಳೆದ ಭಾನುವಾರ ಮನ್‌ದೀಪ್ ಫಾರ್ಮಾಗೆ ಮೃತ ಗೋಪಿ ನನ್ನನ್ನು ಕರೆದುಕೊಂಡು ಹೋಗಿ ಟೈಡಾಲ್ ಮಾತ್ರೆ ಹಾಗೂ ಸಿರಂಜ್ ಹಾಗೂ ಡಿಸ್ಟಲ್ ವಾಟರ್ ಖರೀದಿಸಿ ನಂತರ ಮತ್ತೊಬ್ಬ ಮೃತ ಅಭಿಲಾಷ್‌ನನ್ನು ಕರೆಸಿಕೊಂಡು ಮೂವರು ಕೊದಂಡರಾಮಪುರದ ಮನೆಯಲ್ಲಿ ರಾತ್ರಿ ಸೇರಿದ್ದರು.
ಟೈಡಾಲ್ ಮಾತ್ರೆಯನ್ನು ಕುಟ್ಟಿ ಪುಡಿ ಮಾಡಿ ಡಿಸ್ಟಲ್ ವಾಟರ್ ಜತೆ ಸೇರಿಸಿ ಸಿರಂಜ್‌ಗೆ ತುಂಬಿಸಿಕೊಂಡು ಮೊದಲು ಅವರಿಬ್ಬರು ಹೆಚ್ಚಿನ ಡೋಸ್ ಚುಚ್ಚಿಕೊಂಡಿದ್ದರು. ನನಗೂ ಚುಚ್ಚಿದ್ದರಿಂದ ನನಗೆ ಎದೆ ನೋವು ಬಂದು ಒದ್ದಾಡಿದೆ. ನಂತರ ಆಸ್ಪತ್ರೆಗೆ ಸೇರಿಸಲಾಯಿತು ಎಂದು ತಿಳಿಸಿದ್ದಾನೆ.
ಆತ ನೀಡಿದ ಮಾಹಿತಿಯಾಧರಿಸಿ ಔಷಧಿ ನಿಯಂತ್ರಕ ಅಧಿಕಾರಿಗಳ ಜತೆ ಮನ್‌ದೀಪ್ ಫಾರ್ಮಾ ಮೆಡಿಕಲ್ ಸ್ಟೋರ್ ಮೇಲೆ ದಾಳಿ ನಡೆಸಿದಾಗ ಅಕ್ರಮವಾಗಿ ಟೈಡಾಲ್ ಮಾತ್ರೆಗಳನ್ನು ದಾಸ್ತಾನು ಮಾಡಿಕೊಂಡು ಮಾರಾಟ ಮಾಡಿರವುದು ಪತ್ತೆಯಾಗಿದ ಎಂದು ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Drug Injection crime Death


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ