ನಯವಂಚಕ ಸೆರೆ

Arrest

23-11-2019

ಪ್ರತಿಷ್ಠಿತ ಮಾಲ್‌ಗಳ ಬಳಿ ಸೂಟು ಹಾಕಿಕೊಂಡು ಓಡಾಡುತ್ತಾ ಒಂಟಿ ಮಹಿಳೆಯರನ್ನು ಉದ್ಯಮಿಯೆಂದು ಬಣ್ಣದ ಮಾತುಗಳನ್ನಾಡುತ್ತಾ ನಂಬಿಸಿ ಕಾರಿನಲ್ಲಿ ಅಪಹರಿಸಿ ಲೈಂಗಿಕ ದೌರ್ಜನ್ಯ, ಅತ್ಯಾಚಾರವೆಸಗಿ ನಗದು-ಚಿನ್ನಾಭರಣ, ಮೊಬೈಲ್ ದೋಚುತ್ತಿದ್ದ ಕುಖ್ಯಾತ ಕಾಮುಕ ತಮಿಳುನಾಡು ಮೂಲದ ಎಂಬಿಎ ಪದವೀಧರನೊಬ್ಬ ಹಲಸೂರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ತಮಿಳುನಾಡಿನ ತಿರುಚಿಯ ಶ್ರೀರಂಗಂನ ಜಹಂಗೀರ್ (೩೦) ಬಂಧಿತ ಕಾಮುಕನಾಗಿದ್ದು,ಈತನಿಂದ ಕೃತ್ಯಕ್ಕೆ ಬಳಸುತ್ತಿದ್ದ ಸ್ಕೋಡಾ ಕಾರು, ಮೊಬೈಲ್, ಹ್ಯಾಂಡ್ ಬ್ಯಾಗ್‌ನ್ನು ವಶಪಡಿಸಿಕೊಳ್ಳಲಾಗಿದೆ.ಎಂಜಿ ರಸ್ತೆಯ ಪಾರ್ಕ್ ಹೊಟೇಲ್ ಬಳಿ ಒಂಟಿಯಾಗಿದ್ದ ಮಹಿಳೆಯೊಬ್ಬರನ್ನು ಆರೋಪಿಯು ತಾನು ಕಾರ್ತಿಕ್ ರೆಡ್ಡಿ ದೊಡ್ಡ ಉದ್ಯಮಿ ಎಂದು ಪರಿಚಯ ಮಾಡಿಕೊಂಡಿದ್ದನು.
ನನ್ನ ತಂದೆ ಶಾಸಕರಾಗಿದ್ದ ತಾಯಿ ವೈದ್ಯರಾಗಿದ್ದಾರೆ ನಮ್ಮ ಹೊಟೇಲ್‌ನಲ್ಲಿ ನೀವು ಕೆಲಸಕ್ಕೆ ಸೇರಿಕೊಳ್ಳಬಹುದೆಂದು ನಂಬಿಸಿ ಸ್ಕೂಡಾ ಕಾರಿನಲ್ಲಿ ಬಲವಂತವಾಗಿ ಕರೆದುಕೊಂಡು ಕಾಡಬೀಸನಹಳ್ಳಿಗೆ ಹೋಗಿ ಪರ್ಸ್ ಮೊಬೈಲ್ ದೋಚಿ ಆಕೆಯಿಂದಲೇ ಓಯೋ ಆಯಪ್ ಮೂಲಕ ರೂಂ ಬುಕ್ ಮಾಡಿಸಿ ಅಕ್ರಮ ಬಂಧನದಲ್ಲಿರಿಸಕೊಂಡು ಲೈಂಗಿಕ ಕ್ರೀಯೆಗೆ ಅಹ್ವಾನಿಸಿ ನಿರಾಕರಿಸಿದಾಗ ನನ್ನ ಹೆಸರು ಜಹಾಂಗೀರ್ ಎಂದು ನನ್ನ ಬಳಿ ಪಿಸ್ತೂಲ್ ಇದ್ದು ಕೊಲೆ ಮಾಡುವುದಾಗಿ ಅತ್ಯಾಚಾರವೆಸಗಿ ಆಕೆಯಿಂದಲೇ ರೂಂ ಬಾಡಿಗೆ ಹಣ ಪಾವತಿಸಿದ್ದ ಈ ಸಂಬಂಧ ಸಂತ್ರಸ್ಥ ಮಹಿಳೆ ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೂರ್ವವಿಭಾಗದ ಡಿಸಿಪಿ ಡಾ. ಎಸ್.ಟಿ. ಶರಣಪ್ಪ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿಯು ಬೆಂಗಳೂರು, ಚೆನ್ನೈ ಇನ್ನಿತರ ಕಡೆಗಳಲ್ಲಿ ಹಲವು ಮಹಿಳೆಯರನ್ನು ನಂಬಿಸಿ ಅತ್ಯಾಚಾರವೆಸಗಿ ಹಣ, ಚಿನ್ನಾಭರಣ ದೋಚಿರುವ ಕೃತ್ಯ ನಡೆಸಿರುವುದನ್ನು ಒಪ್ಪಿಕೊಂಡಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಆರೋಪಿಯು ಚೆನ್ನೈನ ಗ್ರೀನ್ ಕೊಕನಟ್ ರೆಸಾರ್ಟ್‌ನಲ್ಲಿ ಗ್ರೂಪ್ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದು, ಎಂಬಿಎ ವ್ಯಾಸಂಗ ಮಾಡಿದ್ದರಿಂದ ನಯವಾಗಿ ಮಾತನಾಡುವುದನ್ನು ಕರಗತ ಮಾಡಿಕೊಂಡಿದ್ದು, ಆಕರ್ಷಕವಾಗಿ ಮಾತನಾಡುತ್ತ ಒಂಟಿ ಮಹಿಳೆಯರನ್ನು ನಾನು ಉದ್ಯಮಿ ಎಂದು ನಂಬಿಸುತ್ತಿದ್ದ.
ಹೋಟೆಲ್ ಉದ್ಯಮ, ಮೀಡಿಯಾ ಸಂಸ್ಥೆ ಚಿನ್ನಾಭರಣ ಅಂಗಡಿಗಳ ಮಾಲೀಕ, ನಾನೇ ಬೆಂಗಳೂರಿಗೆ ೨ನೇ ಅತಿ ದೊಡ್ಡ ಶ್ರೀಮಂತ ಎಂದು ಬಿಂಬಿಸಿಕೊಂಡು ಒಬ್ಬೊಬ್ಬ ಮಹಿಳೆಯರ ಬಳಿ ಜಹಂಗೀರ್, ಕಾರ್ತಿಕ್,ಕಾರ್ತಿಕ್ ರೆಡ್ಡಿ, ಕಿರಣ್, ಕಿರಣ್ ರೆಡ್ಡಿ ಹೆಸರುಗಳಲ್ಲಿ ಪರಿಚಯ ಮಾಡಿ ನಂಬಿಸಿ ತಮ್ಮ ಕಂಪನಿಯಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳುವುದಾಗಿ ಆಸೆ-ಆಮಿಷವೊಡ್ಡಿ ಕಾರಿನಲ್ಲಿ ಕರೆದೊಯ್ದು ಅತ್ಯಾಚಾರವೆಸಗಿ ಹಣ, ಚಿನ್ನಾಭರಣ ದೋಚುತ್ತಿದ್ದ.
ಹೋಟೆಲ್‌ಗೆ ಕರೆದೊಯ್ದ ಮಹಿಳೆಯರಿಂದಲೇ ರೂಮ್ ಬಿಲ್ ಪಾವತಿಸಿದ್ದು, ಈತನ ಕಾಮತೃಷೆಗೆ ಹಲವು ಮಹಿಳೆಯರು ಬಲಿಯಾಗಿರುತ್ತಾರೆ. ಅನೇಕ ಮಹಿಳೆಯರು ಗೌರವಕ್ಕ ಅಂಜಿ ದೂರುಗಳನ್ನು ನೀಡದಿರುವುದು ತನಿಖೆಯಲ್ಲಿ ಕಂಡು ಬಂದಿದೆ ಎಂದರು.
ಆರೋಪಿಯು ಕೃತ್ಯಕ್ಕೆ ಒಯೋ ಆಧಾರಿತ ವಸತಿ ಗೃಹಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರಿಂದ ಆರೋಪಿಯ ಹೆಸರಿನಲ್ಲಿ ಒಯೋ ರೂಮುಗಳಲ್ಲಿ ತಂಗಿರುವ ಬಗ್ಗೆ ದಾಖಲೆ, ಮಾಹಿತಿ ಒದಗಿಸುವಂತೆ ಒಯೋ ಸಂಸ್ಥೆಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.
ಸುಲಿಗೆ ಅತ್ಯಾಚಾರ
ಕಳೆದ ನ. ೫ ರಂದು ರಾತ್ರಿ ೯.೫೦ರ ವೇಳೆ ಎಂಜಿ ರಸ್ತೆಯ ಒನ್ ಎಂಜಿ ಮಾಲ್ ಬಳಿ ಯುವತಿಯೊಬ್ಬಳನ್ನು ಪರಿಚಯಿಸಿಕೊಂಡು ಆಕರ್ಷಕವಾಗಿ ಮಾತನಾಡುತ್ತ ಕಾರಿನಲ್ಲಿ ಕೂರಿಸಿಕೊಂಡು ಮೊಬೈಲ್-ಪರ್ಸ್ ಕಸಿದು ಕೋರಮಂಗಲದ ಪೆಟ್ರೋಲ್ ಬಂಕ್‌ನಲ್ಲಿ ಆಕೆಯ ಎಟಿಎಂ ಕಾರ್ಡಿನಿಂದಲೇ ೪ ಸಾವಿರ ರೂ.ಗಳಿಗೆ ಪೆಟ್ರೋಲ್ ಹಾಕಿಸಿ ಬೆಳ್ಳಂದೂರು, ವರ್ತೂರು, ಸರ್ಜಾಪುರಗಳಲ್ಲಿ ಸುತ್ತಾಡಿಸಿ, ಆಕೆಯಿಂದಲೇ ಒಯೋ ರೂಮ್ ಬುಕ್ ಮಾಡಿಸಿ ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದ.
ಆಕೆ, ನಿರಾಕರಿಸಿದಾಗ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ಮಾಡಿ ರೂಂ ಬಾಡಿಗೆಯಿಂದ ಆಕೆಯಿಂದಲೇ ಪಾವತಿಸಿದ್ದ. ಈ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಳೆದ ಮೇ ೧ ರಂದು ಮಹದೇವಪುರದ ಸಿಂಗಯ್ಯ ಪಾಳ್ಯದ ವಿಆರ್ ಮಾಲ್ ಬಳಿ ಮಹಿಳೆಯೊಬ್ಬರನ್ನು ತಾನು ಕಿರಣ್ ರೆಡ್ಡಿ ಎಂದು ಪರಿಚಯಿಸಿ ಮೀಡಿಯಾ ಕಂಪನಿಯಲ್ಲಿ ಕೆಲಸ ಮಾಡುವಂತೆ ನಂಬಿಸಿ ಕಾರಿನಲ್ಲಿ ಕರೆದೊಯ್ದು ಇಂದಿರಾನಗರದ ಪಬ್‌ಗೆ ಮದ್ಯಪಾನ ಮಾಡುವಂತೆ ಒತ್ತಾಯ ಮಾಡಿದ್ದ.
ನಂತರ ಅಲ್ಲಿಂದ ಮೈಸೂರಿಗೆ ಕಾರಿನಲ್ಲಿ ಕರೆದೊಯ್ದು ಕಂಪೋರ್ಟಿಂಗ್ ಹೋಟೆಲ್‌ನಲ್ಲಿ ರೂಂ ಮಾಡಿ ೩ ದಿನಗಳ ಕಾಲ ಆಕೆಯ ಮೇಲೆ ಬಲಾತ್ಕಾರವಾಗಿ ಅತ್ಯಾಚಾರವೆಸಗಿದ್ದ. ನಂತರ ವಂಡರ್‌ಲಾಗೆ ಕರೆದುಕೊಂಡು ಬಂದು ನನ್ನಲ್ಲಿರುವ ದಾಖಲೆಗಳನ್ನು ನನ್ನ ತಾಯಿಗೆ ಕೊಟ್ಟು ಬರುವುದಾಗಿ ಪರಾರಿಯಾಗಿದ್ದ ಎಂದು ಸಂತ್ರಸ್ಥ ಮಹಿಳೆ ದೂರು ನೀಡಿದ್ದರು.
ಡ್ರಾಪ್ ನೆಪದಲ್ಲಿ ಸುಲಿಗೆ
ಕಳೆದ ಮೇ ೨೩ ರಂದು ಸಂಜೆ ೬.೩೦ರ ವೇಳೆ ತಿರುಪತಿ ತಿಮ್ಮಪ್ಪನ ದರ್ಶನ ಮುಗಿಸಿ ಹೈದರಾಬಾದ್‌ಗೆ ಹೋಗಲು ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಯನ್ನು ನಾನು ಹೈದರಾಬಾದ್‌ಗೆ ಹೋಗುತ್ತಿದ್ದೇನೆ ಎಂದು ನಂಬಿಸಿ ಸ್ಕೋಡಾ ಕಾರಿನಲ್ಲಿ ಕರೆದೊಯ್ದು ವೈಟ್‌ಫೀಲ್ಡ್‌ನ ಫಿನಿಕ್ಸ್ ಮಾಲ್‌ಗೆ ಕರೆದುಕೊಂಡು ಬಂದು ಮಗುವಿಗೆ ಬೊಂಬೆ ತರುತ್ತೇನೆ ಎಂದು ಡೆಬಿಟ್ ಕಾರ್ಡ್ ಪಡೆದುಕೊಂಡು ೪೦ ಸಾವಿರ ರೂ.ಗಳನ್ನು ಸ್ವೈಪ್ ಮಾಡಿ ಕಾರ್ಡನ್ನು ವಾಪಸ್ ಕೊಟ್ಟು ಗೊಂಬೆ ಪ್ಯಾಕ್ ಮಾಡಿಸಿಕೊಂಡು ಬರುವುದಾಗಿ ಹೇಳಿ ಪರಾರಿಯಾಗಿದ್ದ.
ನಂಬಿಸಿ ಮೋಸ
ಕಳೆದ ೨೦೧೭ರಲ್ಲಿ ಚೆನ್ನೈನ ವೇಲಚೇರಿ ಪ್ರದೇಶದ ಫಿನಿಕ್ಸ್ ಮಾಲ್‌ಗೆ ನಂಬಿಸಿದ ಮಹಿಳೆಯನ್ನು ಕರೆದುಕೊಂಡು ಹೋಗಿ ಪೂರ್ವಿಕಾ ಮೊಬೈಲ್ ಶಾಪ್‌ನಲ್ಲಿ ೬೮ ಸಾವಿರ ರೂ.ಗಳನ್ನು ಆಕೆಯ ಡೆಬಿಟ್ ಕಾರ್ಡ್‌ನಿಂದ ಖರೀದಿ ಮಾಡಿ, ಅಲ್ಲದೆ ಆಕೆಯ ಎಟಿಎಂ ಕಾರ್ಡುಗಳಿಂದ ೨ ಲಕ್ಷ ೯೭,೬೦೦ ರೂ.ಗಳನ್ನು ತೆಗೆದುಕೊಂಡು ಮೋಸ ಮಾಡಿದ್ದ ಪ್ರಕರಣ ಚೆನ್ನೈನ ಪೊಲೀಸ್ ಠಾಣೆಯೊಂದರಲ್ಲಿ ದಾಖಲಾಗಿದೆ.
ಚೆನ್ನೈನ ಯುವತಿಯೊಬ್ಬರನ್ನು ಪರಿಚಯ ಮಾಡಿಕೊಂಡು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಕಳೆದ ೨೦೧೮ರ ಸೆ. ೮ ರಂದು ಮಹಾಬಲಿಪುರಂನ ರೆಸಾರ್ಟ್‌ಗೆ ಕರೆದೊಯ್ದು ಅತ್ಯಾಚಾರವೆಸಗಿ ನಂತರ ಮೈಸೂರಿಗೆ ಕರೆದುಕೊಂಡು ಬಂದು ಅಲ್ಲೂ ೧ ವಾರಗಳ ಕಾಲ ಅತ್ಯಾಚಾರ ನಡೆಸಿ ಊಟಿ, ಕೊಡೈಕೆನಾಲ್, ಗೋವಾ ಇನ್ನಿತರ ಕಡೆಗಳಿಗೆ ಆಕೆಯನ್ನು ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿ ಮೋಸ ಮಾಡಿದ್ದ ಎಂದು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Rape Crime Arrest Businessman


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ