ಬ್ಯಾಂಕ್ ನಿವೃತ್ತರ ಸಂಘದಿಂದ ಪ್ರತಿಭಟನೆ

Protest

19-11-2019

ಪಿಂಚಣಿ ನವೀಕರಣ, ಕುಟುಂಬ ಪಿಂಚಣಿ ಹೆಚ್ಚಳ, ವೈದ್ಯಕೀಯ ವಿಮೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಬ್ಯಾಂಕ್ ನಿವೃತ್ತರ ಸಂಘ ಹಾಗೂ ಸಿಬಿಪಿಆರ್ ಒ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು. ಇಂದು ಮಧ್ಯಾಹ್ನ ಟೌನ್ ಹಾಲ್ ಬಳಿ ಸೇರಿದ್ದ ಸಾವಿರಾರು ಮಂದಿ ಬ್ಯಾಂಕ್ ನಿವೃತ್ತರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಪ್ರತಿಭಟನೆ ವೇಳೆ, CBPRO ಅಧ್ಯಕ್ಷರಾದ ಶಾಂತರಾಜು, ಕಾರ್ಯದರ್ಶಿ ಕೃಷ್ಣಮೂರ್ತಿ ಎ ಎನ್, AIBRF ನ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ನಾಯಕ್, AIBPARC ಕಾರ್ಯದರ್ಶಿ ಗೋಪಿನಾಥ್ ರಾವ್, FORBE ಯ ಕಾರ್ಯದರ್ಶಿ ಮಧುಸೂದನ್ ರಾವ್, UFBU ಸಂಚಾಲಕರಾದ ಹೆಚ್. ವಿ ರೈ ಹಾಗೂ AIBOC ಕಾರ್ಯದರ್ಶಿ ಶ್ರೀನಿವಾಸ್ ಮುಂತಾದವರು ಹಾಜರಿದ್ದರು.


ಸಂಬಂಧಿತ ಟ್ಯಾಗ್ಗಳು

Pension Bank Protest Townhall


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Gathering in good numbers to protest against lukewarm attitude of the decision makers to revise pension , upgrade family pension,health insurance.Kudos to the whole community of retired bank staff
  • Satish Chandra J
  • Pensioner