ನಿರ್ಮಲಾ ಬದಲು ಪೀಯೂಷ್ ಗೋಯಲ್?

Piyush Goyal to replace Nirmala Sitharaman?

17-11-2019

ದೇಶದ ಆರ್ಥಿಕತೆ ಅಧೋಗತಿಗೆ ತಲುಪಿರುವ ಈ ಪರಿಸ್ಥಿತಿಯಲ್ಲಿ  ಸರ್ಕಾರ ಅಳಿದುಳಿದ ಮಾನವನ್ನಾದರೂ ಹೇಗೆ ಕಾಪಾಡಿಕೊಳ್ಳೋದು ಎನ್ನುವ ಪ್ರಯತ್ನದಲ್ಲಿದೆ ಎಂದು ಹೇಳಲಾಗುತ್ತಿದೆ. ಕೊನೆಗೆ ಅನಿಷ್ಟಕ್ಕೆಲ್ಲ ಶನೀಶ್ವರನೇ ಕಾರಣ ಎಂಬಂತೆ ಎಲ್ಲದಕ್ಕೂ ನಿರ್ಮಲಾ ಸೀತಾರಾಮನ್ ಕಾರಣ, ಮೋದಿಯಲ್ಲ ಅಂತ ಬಿಂಬಿಸಲು ನಿರ್ಮಲಾ ಸೀತಾರಾಮನ್ ಅವರನ್ನು ಕೆಳಗಿಳಿಸಿ ಆರ್ಥಿಕ ಹಿಂಜರಿತದ ಗೂಬೆಯನ್ನು ಅವರ ತಲೆಮೇಲೆ ಕೂರಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. 

ನಿರ್ಮಲಾ ಸೀತಾರಾಮನ್ ಹೋದರೆ ಅವರ ಜಾಗಕ್ಕೆ ಯಾರು ಬರುತ್ತಾರೆ ಎಂದು ಬಹಳ ಕಷ್ಟ ಪೆಟ್ಟೇನೂ ಯೋಚಿಸಬೇಕಾಗಿಲ್ಲ. ಅರುಣ್ ಜೇಟ್ಲಿ ನಂತರ ಬಿಜೆಪಿಯಲ್ಲಿ ಚಾಣಾಕ್ಷ ಎಂಬ ಹಣೆಪಟ್ಟಿ ಹೊತ್ತಿರುವ ಪೀಯೂಷ್ ಗೋಯಲ್ ಅವರನ್ನು ವಿತ್ತ ಮಂತ್ರಿಯಾಗಿ ತರಲಾಗುವುದು ಮತ್ತು ಅವರ ಮೂಲಕ ಅನೇಕ ಬದಲಾವಣೆಗಳನ್ನೂ ಮಾಡಲಾಗುವುದು. ಸುಬ್ರಹ್ಮಣ್ಯನ್ ಸ್ವಾಮಿಯವರ ಕೆಲವು ಸಲಹೆಗಳನ್ನೂ ಅನುಷ್ಠಾನ ಗೊಳಿಸಲಾಗುವುದು ಎಂದು ಹೇಳಲಾಗುತ್ತಿದೆ. 

ಪೀಯೂಷ್ ಗೋಯಲ್ ಅವರು ಒಂದಷ್ಟು ಪ್ರಭುದ್ಧತೆಯಿಂದ ದೇಶದ ಹಣಕಾಸನ್ನು ನಿಭಾಯಿಸಬಹುದು ಎಂಬ ಊಹೆ ಇರುವುದರಿಂದ ಅವರ ಬಗ್ಗೆ ಉದ್ಯಮ ಕ್ಷೇತ್ರವೂ ಕೂಡ ಸ್ವಾಗಾತಾರ್ಹ ಭಾವನೆಯನ್ನು ಹೊಂದಿದೆ ಎಂದು ಭಾವಿಸಲಾಗಿದೆ. ಪೀಯೂಷ್ ಗೋಯಲ್ ವಿತ್ತ ಮಂತ್ರಿಯಾದರೆ ದೇಶದ ಆರ್ಥಿಕ ಸ್ಥಿತಿ ಒಂದಿಷ್ಟಾದರೂ ಸುಧಾರಿಸಬಹುದು ಎಂಬ ಆಶಾಭಾವನೆ ಬಿಜೆಪಿ ಕಾರ್ಯಕರ್ತರ ವಲಯದಲ್ಲಿದೆ. ಪೀಯೂಷ್ ಗೋಯಲ್ ಹಣಕಾಸು ಮಂತ್ರಿಯಾಗುವುದರ ಬಗ್ಗೆ ಆರ್ ಎಸ್ ಎಸ್ ನಲ್ಲೂ ಸಹಮತ ಇದೆ ಎಂದು ಹೇಳಲಾಗಿದೆ.


ಸಂಬಂಧಿತ ಟ್ಯಾಗ್ಗಳು

Nirmala Finance Economy Kannada


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ